Home ಸ್ಥಳೀಯ ಸಮಾಚಾರ ಧರ್ಮಸ್ಥಳ ಕಾಡಾನೆ ದಾಳಿ ವ್ಯಾಪಕ ಕೃಷಿ ಹಾನಿ; ಜನರಲ್ಲಿ ಆತಂಕ

ಧರ್ಮಸ್ಥಳ ಕಾಡಾನೆ ದಾಳಿ ವ್ಯಾಪಕ ಕೃಷಿ ಹಾನಿ; ಜನರಲ್ಲಿ ಆತಂಕ

0
5

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿಯೂ ಬುಧವಾರ ತಡ ರಾತ್ರಿ ಕಾಡನೆಗಳು ದಾಳಿ ಸಡೆಸಿ ವ್ಯಾಪಕವಾಗಿ ಕೃಷಿಗೆ ಹಾನಿ ಯುಂಟುಮಾಡಿದೆ.
ಇಲ್ಲಿನ ನೇರ್ತನೆ ಪರಿಸರದಲ್ಲಿ ರಾತ್ರಿಯವೇಳೆ ಕಾಡಾನೆಗಳು ಕಾಣಿಸಿಕೊಂಡಿದ್ದು ಶ್ರೀನಿವಾಸ ಎಂಬವರ ತೋಟದ ತೆಂಗಿನ ಗಿಡಗಳನ್ನು ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸಿದೆ. ಈ ಪರಿಸರದ ಇತರ ಹಲವರ ತೋಟಗಳಿಗು ಕಾಡಾನೆ ನುಗ್ಗಿದ್ದು ಅಲ್ಲಲ್ಲಿ ಹಾನಿಯುಂಟುಮಾಡಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಕಾಡಾನೆಗಳು ಓಡಾಟ ನಡೆಸುತ್ತಿದೆ. ಕೊಕ್ಕಡದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಿರುವುದು ಧರ್ಮಸ್ಥಳ ನೇರ್ತನೆ ಪರಿಸರದ ಜನರಲ್ಲಿಯೂ ಆತಂಕ ಮೂಡಿಸಿದೆ. ರಾತ್ರಿಯ ವೇಳೆ ರಸ್ತೆಯಲ್ಲಿ ಓಡಾಡಲೂ ಜನ ಭಯ ಪಡುವಂತಾಗಿದೆ

NO COMMENTS

LEAVE A REPLY

Please enter your comment!
Please enter your name here