


ಬೆಳ್ತಂಗಡಿ; ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ
ಪುದುವೆಟ್ಟು ಗ್ರಾಮದ ಬಾಯ್ತಾರುವಿನಲ್ಲಿ ಕುಸುಮಾವತಿ ಅವರ ಕುಟುಂಬಕ್ಕೆ ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿ ನೀಡಲಾಗಿರುವ ಮನೆ “ಉನ್ನತಿ” ಇದರ ಹಸ್ತಾಂತರನ್ನು ಮೇ 30ರಂದು ಕಶಾಸಕ ಹರೀಶ್ ಪೂಂಜ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಇಂತಹ ಕಾರ್ಯಗಳನ್ನು ಮಾಡುವುದರಿಂದ ಕುಟುಂಬವೊಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಗಳನ್ನು ಮಾಡಲು ಧರ್ಮಸ್ಥಳ ಸೇವಾಸಹಕಾರಿ ಬ್ಯಾಂಕಿನ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಕುಶಾಲಪ್ಪ ಗೌಡ, ಧರ್ಮಸ್ಥಳ ಗ್ರಾ
ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್, ಬ್ಯಾಕಿನ ಉಪಾಧ್ಯಕ್ಷರು ನಿರ್ದೇಶಕರುಗಳು ಹಾಗೂ ಇತರರು ಇದ್ದರು.

ಮಹಾ ಕಾರ್ಯಕ್ಕೆ ಹಲವರ ಸಹಕಾರವಿದೆ: ಸಂಘದ ಅಧ್ಯಕ್ಷ ಪ್ರೀತಂ.ಡಿ
ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರೆಲ್ಲರು ಸೇರಿ ಇಂತಹದ್ದೊಂದು ಮಾಹಾನ್ ಕಾರ್ಯ ಮಾಡಿದ್ದಾರೆ. ಇದಕ್ಕಾಗಿ ಸಂಘದ ಅಧ್ಯಕ್ಷನಾಗಿದ್ದುಕೊಂಡು ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಶಾಸಕ ಹರೀಶ್ ಪೂಂಜರವರ ಪ್ರೋತ್ಸಾಹ ಮಾರ್ಗದರ್ಶನದಿಂದ ಈ ಕಾರ್ಯ ನಡೆಯುತ್ತಿದೆ. ಇದಕ್ಕೆ ಧರ್ಮಸ್ಥಳ, ಪುದುವೆಟ್ಟು ಗ್ರಾಮದ ಸದಸ್ಯರು, ಗ್ರಾಮ ಪಂಚಾಯತ್ ನ ಸದಸ್ಯರುಗಳು, ನಮ್ಮ ಸಂಘದ ನಿರ್ದೇಶಕರುಗಳು, ಸದಸ್ಯರು, ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ. ಮುಂದಿನ ವರ್ಷದಿಂದ ಮನೆಯ ಅಗತ್ಯವಿರುವ ಎರಡು ಕುಟುಂಬಗಳನ್ನು ಗುರುತಿಸಿ ಮನೆ ಕಟ್ಟಿಕೊಡಬೇಕೆಂಬ ಬಗ್ಗೆ ಚಿಂತಿಸಿದ್ದೇವೆ. ನಮ್ಮ ಸದಸ್ಯರ ಈ ಕಾರ್ಯ ಎಲ್ಲರಿಗೂ ಸ್ಫೂರ್ತಿಯಾಗಲಿ, ಇಂತಹ ಮಹಾನ್ ಕೆಲಸ ಎಲ್ಲಾ ಸಂಘ ಸಂಸ್ಥೆಗಳಿಂದ ಆಗಲಿ ಅನ್ನುವುದು ನಮ್ಮ ಆಶಯವಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೀತಂ ಡಿ ತಿಳಿಸಿದರು.
