Home ರಾಜಕೀಯ ಸಮಾಚಾರ ಬೆಳ್ತಂಗಡಿ; ಭಾರತೀಯರನ್ನು ನಿಂದಿಸಿದ ಶಾಸಕ ಹರೀಶ್ ಪೂಂಜ ವಿರುದ್ದ ಸೋಮವಾರ ಪ್ರತಿಭಟನೆ; ಬಿ.ಎಂ ಭಟ್

ಬೆಳ್ತಂಗಡಿ; ಭಾರತೀಯರನ್ನು ನಿಂದಿಸಿದ ಶಾಸಕ ಹರೀಶ್ ಪೂಂಜ ವಿರುದ್ದ ಸೋಮವಾರ ಪ್ರತಿಭಟನೆ; ಬಿ.ಎಂ ಭಟ್

49
0


ಬೆಳ್ತಂಗಡಿ; ಇತ್ತೀಚೆಗೆ ತೆಕ್ಕಾರಿಲ್ಲಿ ದಾರ್ಮಿಕ ಸಭೆಯನ್ನು ದುರುಪಯೋಗ ಪಡಿಸಿಕೊಂಡು ಬೆಳ್ತಂಗಡಿ ಶಾಸಕರು ಭಾರತೀಯ ಪ್ರಜೆಗಳನ್ನು ಅತ್ಯಂತ ಕೀಳು ಶಬ್ದದಿಂದ ಸಂಬೋದಿಸುತ್ತಾ ನಿಂದಿಸಿ ಅವಮಾನಿಸಿರುತ್ತಾರೆ. ಭಾರತದ ಪ್ರಜೆಗಳನ್ನೇ ಕೆಟ್ಟದಾಗಿ ಕಾಣುವ ಇಂತಹವರು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಅವರನ್ನು ಸಂವಿದಾನಿಕ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಸರಕಾರವನ್ನು ಒತ್ತಾಯಸಿ 26.05.2025 ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ಮಿನಿವಿಧಾನ ಸೌಧ ಆವರಣದಲ್ಲಿ ಸಮಾನ ಮನಸ್ಕರ ವೇದಿಕೆಯಡಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಎಂದು ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ ತಿಳಿಸಿದ್ದಾರೆ.
ಇದರೊಂದಿಗೆ ಕುವೆಟ್ಟು ಪಂಚಾಯತು ಅಧ್ಯಕ್ಷೆಯೂ ಅದೇ ರೀತಿ ಮಾತುಗಳನ್ನಾಡುತ್ತಾ ಅವಮಾನಕರವಾಗಿ ಮಾತಾಡಿರುವುದು ಇದರ ಮುಂದುವರಿದ ಭಾಗವೇ ಆಗಿದೆ. ಇಂದು ಜನರ ಬದುಕಿನ ಸಮಸ್ಯೆಗಳನ್ನು, ಬೆಲೆಏರಿಕಯನ್ನು, ಅಕ್ರಮ ಸಕ್ರಮ ಹಕ್ಕುಪತ್ರ ಸಿಗದ ವಿಚಾರವನ್ನು ಬೀಡಿ ಕಾರ್ಮಿಕರಿಗೆ ವೇತನದಲ್ಲಾದ ವಂಚನೆಯ ವಿಚಾರವನ್ನು ಮೂಲಭೂತ ಸವಲತ್ತುಗಳಿಂದ ವಂಚಿತರಾಗುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲಾ ಏನೂ ಮಾತಾಡದ ಇಂತಹ ಶಾಸಕ-ಜನಪ್ರತಿನಿಧಿಗಳು ಕ್ಷೇತ್ರದ ಮತದಾರರನ್ನು ಅವಮಾನಿಸಲು ತುದಿಕಾಲಲ್ಲಿ ನಿಂತಿರುವುದು ವಿಷಾಧಕರ. ಇಂತಹ ಜನಪ್ರತಿನಿಧಿಗಳನ್ನು ಅವರ ಸ್ಥಾನದಿಂದ ಉಚ್ಚಾಟಿಸಲು ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ ಎಂದರು.
ಈ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಮಾಜ ಚಿಂತಕ ಎಂ.ಜಿ ಹೆಗಡೆ ಹಾಗೂ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತಾಡಲಿದ್ದಾರೆ. ತಾಲೂಕಿನ ದೇಶ ಪ್ರೇಮಿ, ನ್ಯಾಯ ಪ್ರಿಯ ಬಂದುಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿಲು ಸಮಾನ ಮನಸ್ಕ ಸಂಘಟನೆಯ ಸಂಚಾಲಕರೂ ಆದ ಬಿ.ಎಂ.ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here