Home ರಾಷ್ಟ್ರ/ರಾಜ್ಯ ಸಿ.ಇ.ಟಿ ಫಲಿತಾಂಶ; ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಸಿ.ಇ.ಟಿ ಫಲಿತಾಂಶ; ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

27
0

ಬೆಳ್ತಂಗಡಿ;  ಇಂಜಿನಿಯರಿಂಗ್ , ನ್ಯಾಚುರೋಪತಿ, ಫಾರ್ಮಸಿ, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ – ಸಿ ಇ ಟಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಪ್ರವಣ್ ಪೊನ್ನಪ್ಪ – 18, ನಿಶಾನ್ ಜೈನ್- 160, ಕೃಪಾ ಸಾಂಚಿ ಮೌರ್ಯ – 436,
ಅನುಷ್ ಬಿ – 482, ಸಫ್ವಾನ್ -572 ,
ಅನುಜ್ ಕೆ ಎಸ್ – 596, ಪ್ರತೀಕ್ಷಾ ಎಸ್ – 616, ಶಾಂತವ್ವ ಬಸಪ್ಪ ಸಾಣಕ್ಕಿ -713,
ಏರಲ್ ಸಾನಿಯಾ ಡಯಾಸ್ – 751 ,
ಸಂದೀಪ್ ದುಲಾಜ್ -727, ಪ್ರಿಮಲ್ ವಿನಿಷಾ ಡಿಸೋಜ 763,
ಧನ್ಯ ಎಸ್ – 904 ಅತ್ಯುತ್ತಮ
ರಾಂಕ್ ಗಳನ್ನು ರಾಜ್ಯ ಮಟ್ಟದಲ್ಲಿ ಪಡೆದು ಕೊಂಡಿದ್ದಾರೆ.
1000 ದ ಒಳಗೆ 28 ವಿದ್ಯಾರ್ಥಿಗಳು,
2000 ದ ಒಳಗೆ 36 ವಿದ್ಯಾರ್ಥಿಗಳು
5000 ದ ಒಳಗೆ 312 ವಿದ್ಯಾರ್ಥಿಗಳು ರಾಂಕ್ ಗಳಿಸಿಕೊಂಡಿದ್ದಾರೆ.


ಬೋರ್ಡ್ ಎಕ್ಸಾಂನಲ್ಲಿ ಅಭೂತ ಪೂರ್ವ ಫಲಿತಾಂಶವನ್ನು ದಾಖಲಿಸುತ್ತಾ ಬಂದ ಎಕ್ಸೆಲ್ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಜೆ ಇ ಇ, ಎನ್ ಡಿ ಎ, ನಾಟಾ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಳೆದ ಶೈಕ್ಷಣಿಕ ವರ್ಷದ, ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ – ನೀಟ್ ನಲ್ಲಿ ನೂರಾರು ವಿದ್ಯಾರ್ಥಿಗಳನ್ನು ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣಕ್ಕೆ ಕಳುಹಿಸಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜು , ನಾಲ್ಕು ವಿದ್ಯಾರ್ಥಿಗಳನ್ನು ವೈದ್ಯಕೀಯ ಜಗತ್ತಿನ ಅತ್ಯುನ್ನತ ಸಂಸ್ಥೆಗಳಾದ ಏಮ್ಸ್ ಗೆ ಪ್ರವೇಶ ಕಲ್ಪಿಸಿ ಕೊಟ್ಟಿರುವುದನ್ನಿಲ್ಲಿ ಸ್ಮರಿಸಿ ಕೊಳ್ಳಬಹುದು.
ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here