



ಬೆಳ್ತಂಗಡಿ: ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಮೇ.20ರಂದು ಶೀನ ಎಂಬವರ ಮನೆ ಸಮೀಪ ನೀರು ಹರಿಯುವ ತೋಡಿನಲ್ಲಿ ಸಂಪೂರ್ಣವಾದ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ.
ದೇಹದ ಭಾಗಗಳು ಸಂಪೂರ್ಣ ಕೊಳೆತು ಹೋದಂತಿದ್ದು ಯಾವುದೇ ಗುರುತು ಪತ್ತೆಯಾಗಿರಲಿಲ್ಲ.
ಧರ್ಮಸ್ಥಳ ಠಾಣೆಯ ಎಸ್.ಐ ಸಮರ್ಥ್ ಆರ್ ಗಾಣಿಗೇರ ಅವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಸ್ಥಳದಲ್ಲಿ ಸಿಕ್ಕಿದ ಶರ್ಟ್ ಒಂದರ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಶಿಬಾಜೆ ನಿವಾಸಿಯಾಗಿರುವ
ಪ್ರಸಾದ್ (37) ಎಂಬವರು ಎಂದು ಗುರುತಿಸಿದ್ದಾರೆ. ಮೃತನ ತಂದೆ ವೆಂಕಪ್ಪ ಪೂಜಾರಿ ಅವರು ಮೃತನ ಗುರುತನ್ನು ಪತ್ತೆ ಹಚ್ವಿದ್ದಾರೆ ಈತ
ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದ್ದು
ನಾಲ್ಕು ದಿನಗಳಿಂದ ಮನೆಗೆ ಬಂದಿರಲಿಲ್ಲ ಎಂದು ತಿಳಿದು ಬಂದಿದೆ ಧರ್ಮಸ್ಥಳ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
