Home ಅಪರಾಧ ಲೋಕ ನಾಲ್ಕೂರು; ಬೈಕ್ ಅಪಘಾತ ಮಹಿಳೆ ಮೃತ್ಯು

ನಾಲ್ಕೂರು; ಬೈಕ್ ಅಪಘಾತ ಮಹಿಳೆ ಮೃತ್ಯು

32
0

ನಾಲ್ಕೂರು: ನಿನ್ನೆ ತಡರಾತ್ರಿ ನಾಲ್ಕೂರು ಗ್ರಾಮದ ಸೂಳಬೆಟ್ಟು ಸನಿಹ ಬೊಕ್ಕಸ ಬಸ್ ನಿಲ್ದಾಣದ ಬಳಿ ಬೈಕ್‌ ಸ್ಕಿಡ್ ಆಗಿ ಸಹಸವಾರೆ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಶಿರ್ಲಾಲುವಿನ ಅಸುಪಾಸಿನಲ್ಲಿ ನಡೆಯುತ್ತಿರುವ ಶುಭಕಾರ್ಯಕ್ರಮಕ್ಕೆ ಹೋಗಿ ಹಿಂದೆ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತ ಮಹಿಳೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕೊಡಿಮಜಲು ಪ್ರತಿಮಾ (37ವರ್ಷ) ಎಂದು ತಿಳಿದು ಬಂದಿದೆ.ಪೋಲೀಸರು ಸ್ಥಳಕ್ಕಾಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here