

ಬೆಳ್ತಂಗಡಿ: ಶಟರ್ ಮುರಿದು ಅಡಿಕೆ ಅಂಗಡಿಯೊಳಗೆ ಕಳ್ಳರು ನುಗ್ಗಿದ ಘಟನೆ ಮಂಗಳವಾರ ಬೆಳ್ತಂಗಡಿ ನಗರದಲ್ಲಿ ನಡೆದಿದೆ.
ಸಂತೆಕಟ್ಟೆ ಬಳಿಯ ಅಡಿಕೆ ಅಂಗಡಿಗೆ ಮಧ್ಯರಾತ್ರಿ ಅಂಗಡಿಯ ಒಂದು ಬದಿಯ ಶಟರ್ ಮುರಿದು ಒಳ ಹೊಕ್ಕ ಕಳ್ಳರು ಅಂಗಡಿಯಲ್ಲಿದ್ದ ಹಣವನ್ನು ದೋಚಿರುವುದಾಗಿ ತಿಳಿದು ಬಂದಿದೆ.

ಮಂಗಳವಾರ ಬೆಳಗ್ಗೆ ಶಟರ್ ಮುರಿದಿರುವುದು ಸ್ಥಳೀಯರು ನೋಡಿ ಮಾಲಕರಿಗೆ ವಿಷಯ ತಿಳಿಸಿದ್ದು, ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸುತ್ತ ಮುತ್ತ ಹಾಗೂ ಅಂಗಡಿಯಲ್ಲಿರುವ ಸಿ.ಸಿ. ಕ್ಯಾಮಾರ ಪರಿಶೀಲನೆ ಮಾಡಿದ್ದಾರೆ. ಮಧ್ಯ ರಾತ್ರಿಯ ವೇಳೆ ಕಳ್ಳರು ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ನಗದು ಸೇರಿದಂತೆ ಏನೆಲ್ಲ ಕಳ್ಳತನ ಆಗಿದೆ ಎಂದು ಪೊಲೀಸರ ಪರಿಶೀಲನೆಯ ಬಳಿಕ ತಿಳಿದು ಬರಬೇಕಾಗಿದೆ.
