

ಬೆಳ್ತಂಗಡಿ: ಇತ್ತೀಚೆಗೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಪಕ್ಷದ ಸಕ್ರಿಯ ಕಾರ್ಯಕರ್ತೆ ನಡ ಗ್ರಾಮದ ಮಂಚದಪಲ್ಕೆ ನಿವಾಸಿ ಬಶೀರ್ ಅಹಮದ್ ರವರ ಪತ್ನಿ ಶ್ರೀಮತಿ ಉಮೈರಾ ಬಾನು ರವರ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದ ಕೆಲವು ಪೋಟೋಗಳನ್ನು ತೆಗೆದು ದುರುಪಯೋಗ ಪಡಿಸಿ ಎಡಿಟ್ ಮಾಡಿ ಅಶ್ಲೀಲವಾಗಿ ಚಿತ್ರಿಸಿ ಬರೆದು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆ ಗೆ ದೂರನ್ನು ನೀಡಲಾಗಿದೆ.
“ಆರಿಪ್ ಕುಂಟಿನಿ ಎಂಬಾತ ಹಾಗೂ ಇತರರು ನನ್ನನ್ನು ತೇಜೋವಧೆ ಮಾಡುವ ಉದ್ದೇಶದಿಂದ ಸಮಾಜಕ್ಕೆ ಅಪನಂಬಿಕೆ ಬರುವಂತೆ ಮತ್ತು ನನ್ನ ಘನತೆಗೆ ದಕ್ಕೆ ತರುವಂತೆ ಚಿತ್ರಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ವಿವಿಧ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ಇನ್ಟ್ರಾ ಗ್ರಾಮ್ ನಲ್ಲಿ ಈರೀತಿ ಮಾಡಿದ ವ್ಯಕ್ತಿ ಮತ್ತು ವಿವಿಧ ಗ್ರೂಪ್ ಎಡ್ಮಿನ್ ಗಳ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಲಿಖಿತ ದೂರನ್ನು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕಾಂಗ್ರೆಸ್ ನ ನಿಯೋಗದೊಂದಿಗೆ ತೆರಳಿ ದೂರು ನೀಡಲಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದರು.
ನಿಯೋಗದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ನಗರ ಘಟಕದ ಅಧ್ಯಕ್ಷರಾದ ವಂದನಾ ಭಂಡಾರಿ ಅಂಡಿಂಜೆ,ಕಳಿಯ ಗ್ರಾಮ ಪಂಚಾಯತ್ ಸದಸ್ಯೆ , ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾಗಿರುವ ಮರೀಟಾ ಪಿಂಟೋ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ
ಸೇವಾದಳದ ಮಾಜಿ ಅಧ್ಯಕ್ಷರಾದ ಸಮದ್ ಕುಂಡಡ್ಕ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರೂ. ಸರಕಾರದ ನಾಮನಿರ್ದೇಶಿತ ಆರೋಗ್ಯ ರಕ್ಷಾ ಸಮಿತಿ ಜಿಲ್ಲಾಸ್ಪತ್ರೆಯ ಸದಸ್ಯರು ಆಗಿರುವ ಅಬ್ದುಲ್ ಕರೀಮ್ ಗೇರುಕಟ್ಟೆ, ಬೆಳ್ತಂಗಡಿ ತಾಲೂಕು ಸಮುದಾಯ ಆಸ್ಪತೆಯ ರಕ್ಷಾ ಸಮಿತಿಯ ಸದಸ್ಯೆ ಸವಿತ, ಮಾಜಿ ಪಂಚಾಯತ್ ಸದಸ್ಯರಾದ ಶ್ರೀನಿವಾಸ ಉಜಿರೆ,ಯುವ ಕಾಂಗ್ರೆಸ್ ನ ಸಿದ್ದೀಕ್ ಮಲೆ ಬೆಟ್ಟು,ಕಲಂದರ್ ಕೊಕ್ಕಡ, ಸದಾನಂದ ನಾಲ್ಕೂರು ಹಾಜರಿದ್ದರು.
