Home ಸ್ಥಳೀಯ ಸಮಾಚಾರ ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ:ಡಿ 14 ಗುರುವಾಯನಕೆರೆಯಲ್ಲಿ ಯಕ್ಷ ಸಂಭ್ರಮ:ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷ...

ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ:ಡಿ 14 ಗುರುವಾಯನಕೆರೆಯಲ್ಲಿ ಯಕ್ಷ ಸಂಭ್ರಮ:ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷ ಸಂಭ್ರಮ 2024 ಪ್ರಶಸ್ತಿ ಪ್ರಧಾನ:

0
15

ಬೆಳ್ತಂಗಡಿ: ಯಕ್ಷ ಧ್ರುವ
ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಇದೇ ಬರುವ ಡಿಸೆಂಬರ್ 14 ಶನಿವಾರದಂದು ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.ಎಂದು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಮಾಹಿತಿ ನೀಡಿದರು. ಅವರು ಬೆಳ್ತಂಗಡಿ ಲಯನ್ಸ್ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಪಟ್ಲ ಫೌಂಡೇಶನ್ ಮಹಾಪೋಷಕರಾದ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿಯವರ ಮಾರ್ಗದರ್ಶನದಂತೆ
ಕಳೆದ ಎರಡು ವರ್ಷಗಳಿಂದ ಉಜಿರೆಯಲ್ಲಿ ಯಕ್ಷ ಸಂಭ್ರಮ ಯಶಸ್ವಿಯಾಗಿ ನಡೆದಿದ್ದು, ತಾಲೂಕಿನ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಮೂರನೇ ವರ್ಷದ. ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 11.30 ಕ್ಕೆ ಕಾರ್ಯಕ್ರಮ ಉದ್ಘಾಟನೆಯನ್ನು ತಹಶೀಲ್ದಾರ್ ಪ್ರಥ್ವಿ ಸಾನಿಕಂ ಮಾಡಲಿದ್ದಾರೆ. ಶಶಿಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.‌ಲಕ್ಷ್ಮೀ ಗ್ರೂಪ್‌ ಉಜಿರೆ ಮಾಲಕ ಮೋಹನ್ ಕುಮಾರ್, ಹಾಗೂ ಯಕ್ಷ ಧ್ರುವ ಯಕ್ಷಶಿಕ್ಷಣ ಮಂಗಳೂರು ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಪಣಂಬೂರು ಭಾಗವಹಿಸಲಿದ್ದಾರೆ.‌


ನಂತರ ತಾಲೂಕಿನ 8 ಶಾಲೆಗಳ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ, ನಡೆಯಲಿದೆ. ಸಂಜೆ 5.30 ರಿಂದ ಗುರುವಾಯನಕೆರೆ ಬಂಟರ ಭವನದ ಬಳಿಯಿಂದ ಭಜನಾ ತಂಡಗಳು,ತಾಲೀಮು ತಂಡ, ಚೆಂಡೆ ವಾದ್ಯಗಳ ಭವ್ಯ ಮೆರವಣಿಗೆ ಕ್ರೀಡಾಂಗಣಕ್ಕೆ ಆಗಮಿಸಲಿದೆ. ಸಂಜೆ 7.30 ಕ್ಕೆ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಯವರಿಗೆ ಯಕ್ಷ ಸಂಭ್ರಮ 2024 ಪ್ರಶಸ್ತಿ ಪ್ರಧಾನ ನಡೆಯಲಿದೆ.‌ ಹಿರಿಯ ವೈದ್ಯರುಗಳಾದ ಗುರುವಾಯನಕೆರೆಯ ಡಾ. ವೇಣುಗೋಪಾಲ ಶರ್ಮ, ಬೆಳ್ತಂಗಡಿಯ ಡಾ.‌ಕೆ.ಜಿ. ಪಣಿಕರ್ ಅವರಿಗೆ ಗೌರವ ಸನ್ಮಾನ, ಹಾಗೂ ಸಾಧಕರಾದ ನಿಡ್ಲೆಯ ಅಗ್ರೀಲಿಫ್ ಸಂಸ್ಥೆಯ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಅವರಿಗರ ಸನ್ಮಾನ ನಡೆಯಲಿದೆ. ಚಲನಚಿತ್ರ ನಟ ನಟಿಯರು, ಕಿರುತೆರೆ , ಯಕ್ಷಗಾನ ಕಲಾವಿದರು ಭಾಗವಹಿಸಲಿದ್ದಾರೆ.ವಿಶೇಷ ರೀತಿಯ ಆಹಾರ ಖಾದ್ಯಗಳು, ಬಂಗಾರ ಗೆಲ್ಲುವ ಅವಕಾಶ,ಕಾರ್ಯಕ್ರಮದಲ್ಲಿ ಇರಲಿದೆ. ಪತ್ರಿಕಾಗೋಷ್ಠಿಯಲ್ಲಿ ರಘುರಾಮ ಶೆಟ್ಟಿ ಉಜಿರೆ, ವಸಂತ ಶೆಟ್ಟಿ ಶ್ರದ್ಧಾ,ಕಿರಣ್ ಕುಮಾರ್, ತುಕರಾಮ್ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here