ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಸ್ಥಳದಲ್ಲಿ ರವಿವಾರ ಮುಂಜಾನೆ 7 ಗಂಟೆಗೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ತೋಟಗಳ ಮೂಲಕ ಹಾಗೂ ನದಿಯಲ್ಲಿ ಓಡಾಟ ನಡೆಸಿದ ಒಂಟಿ ಸಲಗ
ಹೊಸಮಠ ಕಡೆಗೆ ತೆರಳಿರುವ ಬಗ್ಗೆ ವರದಿಯಾಗಿದೆ.
ಯಾವುದೇ ಕೃಷಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಪದೇ ಪದೇ ಆನೆಯ ದಾಳಿಯಾಗುತ್ತಲೇ ಇರುವರಿಂದ ಪ್ರದೇಶದ ಜನರು ಭಯಭೀತಗೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ, ಸರ್ಕಾರ ಸೂಕ್ತ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.