Home ರಾಜಕೀಯ ಸಮಾಚಾರ ಸಿ.ಪಿ.ಐ.ಎಂ ಪಕ್ಷದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಆಯ್ಕೆ

ಸಿ.ಪಿ.ಐ.ಎಂ ಪಕ್ಷದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಆಯ್ಕೆ

17
0


ಬೆಳ್ತಂಗಡಿ; ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಷ್ವಾದಿ) ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೂತನ ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಬಿ.ಎಂ.ಭಟ್ ಅವರು ಸರ್ವಾನುಮತದಿಂದ ಆಯ್ಕೆಯಾದರು. ಪಕ್ಷದ ತಾಲೂಕು ಸಮ್ಮೇಳನ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆದು ಇವರನ್ನು ಮುಂದಿನ 3 ವರ್ಷದ ಅವದಿಗೆ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಇವರು 1990 ರಿಂದ ಸಿಪಿಐ(ಎಂ) ಮೂಲಕ ರಾಜಕೀಯ ಪ್ರವೇಶಿಸಿ ಕಳೆದ 34 ವರ್ಷಗಳಿಂದ ಕಾರ್ಮಿಕರ, ರೈತರ, ಸಂಘಟನೆ ಮಾಡಿ ಅವರ ಪರ ಕಾರ್ಯನಿರ್ವಹಿಸುತ್ತಿರುವ ಇವರು ಬೀಡಿ ಕಾರ್ಮಿಕರ, ಅಂಗನವಾಡಿ, ಬಿಸಿಯೂಟ, ಆಶಾ, ಅಟೋ ಮೊದಲಾದ ಕಾರ್ಮಿಕ ಸಂಘಟನೆಗಳ ನೇತೃತ್ವವನ್ನೂ ವಹಿಸಿದ್ದಾರೆ.
ಇವರ ಜೊತೆ ತಾಲೂಕು ಸಮಿತಿ ಸದಸ್ಯರಾಗಿ ಪಾಂಗಳ ಲಕ್ಷ್ಮಣ ಗೌಡ, ಜಯರಾಮ ಮಯ್ಯ, ಶ್ಯಾಮರಾಜ್ ಪಟ್ರಮೆ, ಈಶ್ವರಿ ಶಂಕರ್, ನೆಬಿಸಾ, ಧನಂಜಯ ಗೌಡ, ಲೋಕೇಶ್ ಕುದ್ಯಾಡಿ, ಅಜಿ.ಎಂ.ಜೋಸೆಫ್ ವೇಣೂರು, ಜಯಶ್ರೀ ಕಳೆಂಜ, ಸುಕುಮಾರ್ ಎಂ.ಕೆ. ದಿಡುಪೆ ಅವರುಗಳು ಆಯ್ಕೆಯಾದರು. 2024 ನವಂಬರ್ 17 ರಿಂದ 19 ತನಕ ನಡೆಯಲಿರುವ ಸಿಪಿಐಎಂ ಜಿಲ್ಲಾ ಸಮ್ಮೇಳನಕ್ಕೆ 30 ಜನ ಪ್ರತಿನಿಧಿಗಳನ್ನೂ ಸಮ್ಮೇಳನ ಸರ್ವಾನುತದಿಂದ ಆಯ್ಕೆ ಮಾಡಿತು.

LEAVE A REPLY

Please enter your comment!
Please enter your name here