Home ಅಪರಾಧ ಲೋಕ ಗೇರು ಕಟ್ಟೆ ಸಹಾಯ ಮಡುವ ನೆಪದಲ್ಲಿ ವೃದ್ದನ ಎ.ಟಿ.ಎಂ ಕಾರ್ಡ್ ಅಪಹರಿಸಿ ಹಣ ಕಳ್ಳತನ

ಗೇರು ಕಟ್ಟೆ ಸಹಾಯ ಮಡುವ ನೆಪದಲ್ಲಿ ವೃದ್ದನ ಎ.ಟಿ.ಎಂ ಕಾರ್ಡ್ ಅಪಹರಿಸಿ ಹಣ ಕಳ್ಳತನ

40
0

ಬೆಳ್ತಂಗಡಿ; ಗೇರುಕಟ್ಟೆಯಲ್ಲಿ ಎ.ಟಿ.ಎಂ ಕೇಂದ್ರದಲ್ಲಿ ಹಣ ತೆಗೆಯುತ್ತಿದ್ದ ವೃದ್ದನ ಕೈಯಿಂದ ಎ.ಟಿ.ಎಂ ಕಾರ್ಡ್ ಅನ್ನು ಕಸಿದುಕೊಂಡ ಅಪರಿಚಿತರು ಅದರಲ್ಲಿದ್ದ ಹಣವನ್ನು ಕಸಿದುಕೊಂಡ ಘಟನೆ ಸಂಭವಿಸಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.
ಗೇರುಕಟ್ಟೆ ನಿವಾಸಿ ಅಬೂಬಕ್ಕರ್ (71) ಎಂಬವರೇ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ.
ಇವರು ಗೇರುಕಟ್ಟೆ ಕೆನರಾ ಬ್ಯಾಂಕಿನ ಎ.ಟಿ.ಎಂ ನಲ್ಲಿ ಅ 2ರಂದು ಇವರು ಹಣ ತೆಗೆಯಲೆಂದು ಹೇಗಿದ್ದು ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಎ.ಟಿ.ಎಂ ಒಳಗೆ ಬಂದಿದ್ದು ಅವರಿಗೆ ಸಹಾಯ ಮಾಡಲು ಮುಂದಾಗುದ್ದಾರೆ. ಹಿಂದಿಯಲ್ಲಿ ಮಾತನಾಡುತ್ತಿದ್ದ ಇವರಿಗೆ ಸಹಾಯ ಅಗತ್ಯವಿಲ್ಲ ಎಂದು ಹೇಳಿದರೂ ಅಪರಿಚಿತರು ಅಲ್ಲಿ ಅವರೊಂದಿಗೆ ಇದ್ದು ಹಣ ತೆಗೆದ ಬಳಿಕ ಅವರು ಅಂದು ಹಿಂತಿರುಗಿದ್ದರು. ಇದಾದ ಬಳಿಕ ಎರಡು ದಿನಗಳ ಬಳಿಕ ಇವರು ಮತ್ತೆ ಎ.ಟಿ.ಎಂ ಗೆ ಹೋದಾಗ ಎ‌ಟಿ.ಎಂ‌ಕಾರ್ಡ್ ಕೆಲಸ ಮಾಡದಿರುವುದು ಕಂಡು ಬಂದಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಖಾತೆಯಲ್ಲಿದ್ದ 49,200 ರೂ ನಗದನ್ನು ಎ‌.ಟಿ.ಎಂ ಕಾರ್ಡ ಬಳಸಿ ತೆಗೆದಿರುವುದು ಕಂಡು ಬಂದಿದೆ. ಅಪರಿಚಿತ ವ್ಯಕ್ತಿಗಳು ಅ‌2 ರಂದು ಎ.ಟಿ.ಎಂ ಕೇಂದ್ರದಿಂದ ಅಬೂಬಕ್ಕರ್ ಅವರಿಂದ ಎ.ಟಿ.ಎಂ ಕಾರ್ಡನ್ನು ಅಪಹರಿಸಿದ್ದು ಯಾವುದೋ ಹಳೆಯ ಕಾರ್ಡನ್ನು ಅವರಿಗೆ ನೀಡಿದ್ದರು. ಬಳಿಕ ಕಾರ್ಡನ್ನು ಉಪಯೋಗಿಸಿ ಹಣ ಕಬಳಿಸಿದ್ದರು. ಇದೀಗ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತುದ್ದಾರೆ

LEAVE A REPLY

Please enter your comment!
Please enter your name here