Home ಸ್ಥಳೀಯ ಸಮಾಚಾರ ಅಂಗನವಾಡಿ ನೌಕರರ ಸಂಬಳ ಬಾಕಿ ತಕ್ಷಣ ಪಾವತಿಸಲು ಸಿಐಟಿಯು ಆಗ್ರಹ

ಅಂಗನವಾಡಿ ನೌಕರರ ಸಂಬಳ ಬಾಕಿ ತಕ್ಷಣ ಪಾವತಿಸಲು ಸಿಐಟಿಯು ಆಗ್ರಹ

15
0
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.4690104, 0.41653278);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;


ಬೆಳ್ತಂಗಡಿ; ಅಂಗನವಾಡಿ ನೌಕರರಿಗೆ ಕಳೆದ ಜುಲೈ ತಿಂಗಳಿಂದ ಸಂಬಳ ನೀಡದೇ ಸತಾಯಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಖಂಡನೀಯ, ಮಹಿಳೆಯರನ್ನು ಜೀತದಾಳುಗಳಂತೆ ದುಡಿಸುವ ಪ್ರಯತ್ನ ಇದಾಗಿದೆ. ಎರಡೂ ಸರಕಾರಗಳು ಜಂಟೀ ಜವಬ್ದಾರಿಯಿಂದ ನಡೆಸುವ ಈ ಐಸಿಡಿಎಸ್ ಯೋಜನೆಯ ಅವ್ಯವಸ್ಥೆ ಬಗ್ಗೆ ಸರಕಾರಗಳು ಉತ್ತರಿಸಬೇಕಿದೆ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದರು.
ಅಂಗನವಾಡಿ ನೌಕರರ 3 ತಿಂಗಳ ಸಂಬಳ ಬಾಕಿಯನ್ನು ತಕ್ಷಣ ಪಾವತಿಗೆ ಆಗ್ರಹಿಸಿ, ಸರಕಾರ ತನ್ನ ಆದೇಶದಂತೆ ನಿವೃತ್ತರಿಗೆ ನೀಡಬೇಕಾದ ಗ್ರಾಚ್ಯುವಿಟಿಯನ್ನು ತಕ್ಷಣ ಪಾವತಿಸಲು ಆಗ್ರಹಿಸಿ, ಕೆಲವು ಸ್ವತಂತ್ರ ಸಂಘಗಳು ಈ ಗ್ರಾಚ್ಯುವಿಟಿ ಆದೇಶ ಹಿಂಪಡೆಯಬೇಕೆಂಬ ಹೋರಾಟಕ್ಕೆ ಮಣಿಯಬಾರದು ಆಗ್ರಹಸಿ, ಎಲ್ಲಾ ಅಂಗನವಾಡಿಗಳಲ್ಲಿ ಸರಕಾರ ತಾನು ಒಪ್ಪಿದಂತೆ ಎಲ್.ಕೆ.ಜಿ. ಯುಕೆಜಿ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ಸಿಡಿಪಿಓ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಸಿಡಿಪಿಓ ಮೂಲಕ ಸರಕಾರಕ್ಕೆ ಮನವಿ ನೀಡುವ ಸಂದರ್ಭದಲ್ಲಿ ಅವರು ಈ ವಿಷಯವನ್ನು ತಿಳಿಸಿದರು. ಚುನಾವಣಾ ನೀತಿ ಸಂಹಿತೆ ಗೌರವ ನೀಡಿ ಪ್ರತಿಭಟನೆ ಬದಲಿಗೆ ಸಂಘದ ಸಮಿತಿ ಸದಸ್ಯರುಗಳು ಬಂದು ಈ ಮನವಿ ನೀಡುತ್ತಿರುವುದಾಗಿದೆ ಎಂದ ಅವರು ಒಂದಲ್ಲ ಕಾರಣ ತಂದಿಟ್ಟು ಹೋರಾಟವನ್ನು ತಡೆಯುವ ಸರಕಾರ ಸಂಬಳ ನೀಡದೆ ದುಡಿಸುವುದಕ್ಕೆ ಯಾವ ಶಿಕ್ಷೆ ನೀಡಬೇಕು ? ಎಂದು ಪ್ರಶ್ನಿಸಿದರು.

ನಾವು ಕಾನೂನಿಗೆ ಗೌರವ ನೀಡಿ ಈ ಮನವಿ ನೀಡುವುದಕ್ಕೆ ಸೀಮಿತಗೊಳಿಸಿದ್ದೇವಾದರೂ ಸರಕಾರ ಈ ಮಹಿಳಾ ನೌಕರರ ಕಷ್ಟಗಳ ಬಗ್ಗೆ ಗಮನ ನೀಡಬೇಕಾಗಿದೆ ಎಂದರು.
ಈ ಸಂದರ್ಭ ಸಂಘದ ಅದ್ಯಕ್ಷೆ ಗಾಯತ್ರಿ ದೇವಿ ಮುಖಂಡರುಗಳಾದ ಅರುಣ ಬಿ, ಜಯಲಕ್ಷ್ಮಿ, ಅಪ್ಪಿ, ಸಿಐಟಿಯು ಮುಖಮಡರುಗಳಾದ ಈಶ್ವರಿ, ರಾಮಚಂದ್ರ, ಡಿ.ವೈ.ಎಫ್.ಐ. ಮುಖಂಡರಾದ ಅಬಿಷೇಕ್ ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here