Home ಬ್ರೇಕಿಂಗ್‌ ನ್ಯೂಸ್ ಬೆಳ್ತಂಗಡಿ, ತಾಲೂಕಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂಸ್ಟೇಗಳಿಗೆ ಅರಣ್ಯ ಇಲಾಖೆಯಿಂದ ನೋಟೀಸ್

ಬೆಳ್ತಂಗಡಿ, ತಾಲೂಕಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂಸ್ಟೇಗಳಿಗೆ ಅರಣ್ಯ ಇಲಾಖೆಯಿಂದ ನೋಟೀಸ್

44
0
Neetis from Forest Department for 54 homestays in eco-sensitive area of ​​Belthangadi Taluk

ಬೆಳ್ತಂಗಡಿ; ತಾಲೂಕಿನಲ್ಲಿ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಹಾಗೂ ಉದ್ಯಾನವನದ ಬಫರ್ ಝೋನ್ ಎಂದು ಗುರುತಿಸಲಾಗಿರುವ ಪರಿಸರಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂ ಸ್ಟೇಗಳಿಗೆ ಅರಣ್ಯ‌ ಇಲಾಖೆಯ ವನ್ಯಜೀವಿ ವಿಭಾಗದವರು ನೋಟೀಸ್ ನೀಡಿ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ.
ಯಾವುದೇ ಪರವಾನಿಗೆಯಿಲ್ಲದೆ ಕುದುರೇ ಮುಖ‌ ರಾಷ್ಟ್ರೀಯ ಉದ್ಯಾನವನದ ಸುತ್ತಲೂ ಅನಧಿಕೃತವಾಗಿ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ನೋಟೀಸ್ ನೀಡಿ ದಾಖಲೆಗಳನ್ನು‌ ಹಾಜರು ಪಡಿಸುವಂತೆ ಸೂಚಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2020 ರಲ್ಲಿ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಬಫರ್ ಜೋನ್ ಬಗ್ಗೆ ಅಂತಿಮ‌ ನೋಟಿಫಿಕೇಶನ್ ಆಗಿದ್ದು ಬಫರ್ ಝೋನ್ ಅನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ.
ಉದ್ಯಾನವನದ ಸುತ್ತಲೂ ಇರುವ ಅನಧಿಕೃತ ಹೋಂಸ್ಟೇಗಳನ್ನು ಉಪಯೋಗಿಸಿ ಉದ್ಯಾನವನದೊಳಗೆ ಅನಧಿಕೃತವಾಗಿ ಟ್ರಕ್ಕಿಂಗ್ ನಡೆಯುತ್ತಿದೆ ಹಾಗೂ ಜಲಪಾತಗಳಿಗೆ ತೆರಳುತ್ತಿದ್ದಾರೆ. ಈ ಬಗ್ಗೆ ಈ ಹಿಂದೆಯೂ ಹಲವಾರು ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿತ್ತು.
ಇದೀಗ ಅರಣ್ಯ ಇಲಾಖೆ ರಾಜ್ಯದಾದ್ಯಂತ ಅನುಮತಿ ಪಡೆಯದೆ ನಡೆಸುತ್ತಿರುವ ಹೋಂಸ್ಟೇಗಳು ರೆಸಾರ್ಟ್ ಗಳ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಬೆಳ್ತಂಗಡಿ ತಾಲೂಕಿನಲ್ಲಿಯೂ ನೋಟೀಸ್ ನೀಡಲಾಗಿದೆ.
ಲಭ್ಯ ಮಾಹಿತಿಯಂತೆ ತಾಲೂಕಿನ ಪರಿಸರ ಸೂಕ್ಷ್ಮ ಪ್ರದೇಶ ದಲ್ಲಿ ಕಾರ್ಯನಿರ್ವಹಿಸುತ್ತಿರುವ 54ಹೋಂ ಸ್ಟೇ ಗಳಿಗೆ ನೋಟೀಸ್ ನೀಡಲಾಗಿದೆ. ಇದರಲ್ಲಿ ಬಹುತೇಕ ಹೋಂಸ್ಟೇಗಳು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದೆ.
ಹಲವು ಹೋಂಸ್ಟೇಗಳಿಗೆ ಗ್ರಾಮ ಪಂಚಾಯತ್ ನಿಂದ ನೀಡಿರುವ ನಿರಪೇಕ್ಷಣಾ ಪತ್ರಗಳೇ ಆಧಾರವಾಗಿದೆ ಎಂದು ತಿಳಿದು ಬಂದಿದೆ. ಉದ್ಯಾನವನದ ಬಫರ್ ಝೋನ್ ನಲ್ಲಿ ಹೋಂಸ್ಟೇಗಳನ್ನು ನಡೆಸಲು ಅರಣ್ಯ ಇಲಾಖೆಯ ಅನುಮತಿಯೂ ಬೇಕಾಗುತ್ತದೆ. ಆದರೆ ಇಲಾಖೆ ಯಾರಿಗೂ ಅನುಮತಿ ನೀಡಿಲ್ಲ ಬೆರಳೆಣಿಕೆಯ ಹೋಂಸ್ಟೇಗಳು ಮಾತ್ರ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿಯನ್ನು ಪಡೆದು ಕಾರ್ಯನಿರ್ವಹಿಸುತ್ತಿದೆಆದರೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಇವುಗಳ ಕಾರ್ಯನಿರ್ವಹಣೆಯೂ ನಿಲ್ಲಿಸಬೇಕಾಗಿ ಬರಲಿದೆ.

ಸಾಂದರ್ಭಿಕ ಚಿತ್ರ

ಅರಣ್ಯ ಇಲಾಖೆಯ ವನ್ಯ ಜೀವಿ ವಲಯದಿಂದ ವಲಯದ ವ್ಯಾಪ್ತಿಯಲ್ಲಿರು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ 54 ಹೋಂ ಸ್ಟೇಗಳಿಗೆ ನೀಟೀಸು ನೀಡಿ ದಾಖಲೆಗಳನ್ನು ಹಾಜರು ಪಡಿಸುವಂತೆ ಸೂಚಿಸಲಾಗಿದೆ. ಈ ದಾಖಲೆಗಳು ಬಂದ ಬಳಿಕ ಇದನ್ನು ಪರಿಶೀಲಿಸಿ ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು

ವಿ ಶರ್ಮಿಷ್ಠ
ವಲಯ ಅರಣ್ಯಾಧಿಕಾರಿ
ಬೆಳ್ತಂಗಡಿ ವನ್ಯಜೀವಿ ವಲಯ

LEAVE A REPLY

Please enter your comment!
Please enter your name here