Home ಅಪರಾಧ ಲೋಕ ಕುವೆಟ್ಟಿನಲ್ಲಿ ಅಕ್ರಮ ಗಾಂಜಾ ಮಾರಾಟ; ಪೊಲೀಸ್ ಕಾರ್ಯಾಚರಣೆ ಆರೋಪಿ ಬಂಧನ, ಗಾಂಜಾ ವಶಕ್ಕೆ

ಕುವೆಟ್ಟಿನಲ್ಲಿ ಅಕ್ರಮ ಗಾಂಜಾ ಮಾರಾಟ; ಪೊಲೀಸ್ ಕಾರ್ಯಾಚರಣೆ ಆರೋಪಿ ಬಂಧನ, ಗಾಂಜಾ ವಶಕ್ಕೆ

842
0

ಬೆಳ್ತಂಗಡಿ; ಕುವೆಟ್ಟು ಗ್ರಾಮದ ಸಬರ ಬೈಲು ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನ ನಡೆಸುತ್ತಿದ್ದ ಪ್ರಕರಣವೊಂದನ್ನು ಮಂಗಳೂರಿನ ಸಿ.ಇ.ಎನ್ ಅಪರಾಥ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಮಹಮ್ಮದ್ ರಫೀಕ್ (37) ಎಂಬಾತನಾಗಿದ್ದಾನೆ.
ಖಚಿತ ಮಾಹಿತಿಯ ಮೇರೆಗೆ ಆ 31ರಂದು ರಾತ್ರಿಯ ವೇಳೆ ಸಿ‌.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮಂಜುನಾಥ್ ಟಿ ಹಾಗೂ ತಂಡ ಸಬರಬೈಲು ಬಸ್ ನಿಲ್ದಾಣಕ್ಕೆ ಬಂದಾಗ ಅನುಮಾನಾಸ್ಪದವಾಗಿ ನಿಂತಿದ್ದ ಮಹಮ್ಮದ್ ರೋಫಿಕ್ ನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಳಿ ಇದ್ದ ಚೀಲದಲ್ಲಿ ಅಂದಾಜು 1,150 ಗ್ರಾಂ ಮಾದಕ ವಸ್ತವಾದ ಗಾಂಜಾ ಇರುವುದು ಕಂಡು ಬಂದಿದ್ದು ಆರೋಪಿಯನ್ನು ವಿಚಾರಿಸಿದಾಗ ಕೇರಳದಿಂದ ಗಾಂಜಾವನ್ನು ತಂದು ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವುಚಾರವನ್ನು ಒಪ್ಪಿಕೊಂಡಿದ್ದಾನೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಸುಮಾರು ರೂ 20,000 ಎಂದು ಅಂದಾಜಿಸಲಾಗಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

LEAVE A REPLY

Please enter your comment!
Please enter your name here