ಬೆಳ್ತಂಗಡಿ; ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರ ಹಳ್ಳದಲ್ಲಿ ಭಾನುವಾರ ಅಪರಾಹ್ನ ಭಾರೀ ಬಿರುಗಾಳಿ ಬೀಸಿದ್ದು ಮನೆಗಳಿಗೆ ಹಾಗೂ ಕೃಷಿಗೆ ವ್ಯಾಪಕ ಹಾನಿ ಸಂಭವಿಸಿದೆ.
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಿರುಗಾಳಿ ಎದ್ದಿದ್ದು ಜನರಲ್ಲಿ ಭಯ ಮೂಡಿಸಿತ್ತು.
ಈಪರಿಸರದಲ್ಲಿ ಭಾರೀ ಗಾಳಿಗೆ ನೂರಾರು ಅಡಿಕೆ ಮರಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಇಲ್ಲಿನನಿವಾಸಿ ರತ್ನಾವತಿ ಎಂಬವರ ಮನೆಯ ಹಂಚು ಹಾಗೂ ಶೀಟ್ ಗಳು ಸಂಪೂರ್ಣವಾಗಿ ಗಾಳಿಗೆ ಹಾರಿ ಹೋಗಿದೆ. ಪಿಜಿನಡ್ಕ ಕಾಲೊನಿಯ ಹಲವು ಮನೆಗಳ ಮೇಲ್ವಾವಣಿಗೆ ಹಾನು ಸಂಭವಿಸಿದೆ. ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಏಕಾಏಕಿ ಬಂದ ಬಿರುಗಾಳಿಗೆ ಜನರು ತತ್ತರಿಸಿ ಹೋಗಿದ್ದಾರೆ ಗಾಳಿಯ ರಭಸಕ್ಕೆ ಹಂಚುಗಳು ಗಾಳಿಯಲ್ಲಿ ತೇಲಾಡುತ್ತಿದ್ದವು ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.