ಬೆಳ್ತಂಗಡಿ; ಸಂಯುಕ್ತ ಕ್ರೈಸ್ತ ಸಂಘಟನೆ ಬೆಳ್ತಂಗಡಿ ವತಿಯಿಂದ ಆ11 ರವಿವಾರ ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ಮಡಂತ್ಯಾರು ಇಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾಗಿ ದ್ವಿತೀಯ ಅವಧಿಗೆ ಆಯ್ಕೆಯಾದ ಗೌರವಾನ್ವಿತ ಐವನ್ ಡಿಸೋಜಾ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಗಾರವನ್ನು ಅದ್ದೂರಿಯಿಮದ ಏರ್ಪಡಿಸಲಾಗಿದೆ ಎಂದು ಕಥೋಲಿಕ್ ಸಭಾ ಬೆಳ್ತಂಗಡಿಯ ಅಧ್ಯಕ್ಷರಾದ ಲಿಯೋ ರೋಡ್ರಿಗಸ್ ತಿಳಿಸಿದ್ದಾರೆ
ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.
ಕಥೋಲಿಕ್ ಸಭಾ ಬೆಳ್ತಂಗಡಿ ವಲಯ, ಚರ್ಚ್ ಪಾಲನಾ ಮಂಡಳಿ ಬೆಳ್ತಂಗಡಿ ವಲಯ, ಆಲ್ ಇಂಡಿಯಾ ಕಥೋಲಿಕ್ ಯೂನಿಯನ್, ಕೆ.ಎಸ್.ಎಂ.ಸಿ.ಎ ಬೆಳ್ತಂಗಡಿ ಧರ್ಮೊಪ್ರಾಂತ್ಯ, ಎಲ್.ಪಿ.ಸಿ ಚರ್ಚ್ ಕರ್ನಾಟಕ, ನ್ಯೂ ಲೈಫ್ ಫೆಲೋಶಿಪ್ ಕರ್ನಾಕ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ,
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾರವರನ್ನು ಆಕರ್ಷಕ ಬ್ಯಾಂಡ್ ವಾದ್ಯಗಳೊಂದಿಗೆ ಸ್ವಾಗತಿಸಿ ಸನ್ಮಾನಿಸಲಾಗುವುದುಎಂದು ಅವರು ತಿಳಿಸಿದರು. ಸನ್ಮಾನ ಸಮಾರಂಭದ ಘನ ಅಧ್ಯಕ್ಷತೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ
ಡಾ| ಲಾರೆನ್ಸ್ ಮುಕ್ಕುಯಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಬೆಳ್ತಂಗಡಿ ವಲಯದ ಪ್ರಧಾನ ಗುರುಗಳಾದ ರೇ। ಫಾ। ಡಾ। ವಾಲ್ಟರ್ ಡಿಮೆಲ್ಲೊ, ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರಿನ ಧರ್ಮಗುರುಗಳಾದ
ಡಾ। ಸ್ಟೇನಿ ಗೋವಿಯಸ್ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಖ್ಯಾತ ವಕೀಲರು ಹಾಗೂ ಆಲ್ ಇಂಡಿಯಾನ್ ಕ್ಯಾಥೋಲಿಕ್ ಯೂನಿಯನ್ ಕರ್ನಾಟಕ ಇದರ ಅಧ್ಯಕ್ಷರಾದ ಸೇವಿಯರ್ ಪಾಲೇಲಿ, ಅಭಿನಂದನಾ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ಬೆಳ್ತಂಗಡಿ ವಲಯದ ಕಥೋಲಿಕ್ ಸಭಾ ಅಧ್ಯಕ್ಷರಾದ ಲಿಯೋ ರೊಡ್ರಿಗಸ್, ಆಲ್ವಿನ್ ಡಿಸೋಜಾ ಅಧ್ಯಕ್ಷರು ಕಥೋಲಿಕ್ ಸಭಾ (ರಿ.) ಕೇಂದ್ರೀಯ ಸಮಿತಿ, ಬಿಟ್ಟಿ ನೆಡುನಿಲಂ, ಅಧ್ಯಕ್ಷರು ಕೆ.ಎಸ್.ಎಂ.ಸಿ.ಎ (ರಿ.) ಕೇಂದ್ರ ಸಮಿತಿ ಕೆ.ಪಿ ಜೋಸೆಫ್ ಕಾರ್ಯದರ್ಶಿ LPC ಚರ್ಚ್ ಬೆಳ್ತಂಗಡಿ, ಜೆರಾಲ್ಡ್ ಮೊರಾಸ್ ಕಾರ್ಯದರ್ಶಿ ರ್ಚ್ ಪಾಲನಾ ಸಮಿತಿ ಬೆಳ್ತಂಗಡಿ ವಲಯ, ಉಪಾಧ್ಯಕ್ಷರು ಚರ್ಚ್ ಪಾಲನಾ ಸಮಿತಿ ಮಡಂತ್ಯಾರು, ಐರಿನ್ ಸಿಕ್ಕೇರಾ
ಹಿತಾ ಸಂಚಾಲಕಿ ಕಥೋಲಿಕ್ ಸಭಾ (ರಿ.) ಬೆಳ್ತಂಗಡಿ ವಲಯ, ಪಾಸ್ಟಾರ್ ಅಂತೋನಿ ರೋಡ್ರಿಗಸ್ ನ್ಯೂ ಲೈನ್ ಫೆಲೋಶಿಪ್ ಮಡಂತ್ಯಾರು ಉಪಸ್ಥಿತಿ ಇರಲಿದ್ದಾರೆ.
ಈ ಸಂದರ್ಭದಲ್ಲಿ ಕ್ರೈಸ್ಥ ಸಮುದಾಯದ ಮುಂದಿರುವ ಈಗಿನ ಸವಾಲುಗಳು ಹಾಗೂ ಸಂಘಟನೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ಕಾರ್ಯಾಗಾರವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಜೆರಾಲ್ಡ್ ಮೋರಾಸ್, ವಿನ್ಸೆಂಟ್ ಡಿಸೋಜ, ಫಿಲಿಪ್ ಡಿಕುನ್ಹ, ಸುಪ್ರಿತ್ ಫರ್ನಾಂಡೀಸ್ ಉಪಸ್ಥಿತರಿದ್ದು ಮಾಹಿತಿಗಳನ್ನು ನೀಡಿದರು.
Home ಸ್ಥಳೀಯ ಸಮಾಚಾರ ಆ11ಮಡಂತ್ಯಾರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರಿಗೆ ಕ್ರೈಸ್ಥ ಸಂಘಟನೆಗಳಿಂದ ಸನ್ಮಾನ