ಬೆಳ್ತಂಗಡಿ; ಭರೀ ಮಳೆಗೆ ಲಾಯಿಲ ಗ್ರಾಮದಲ್ಲಿ ಪ್ರಚಾಹದ ಸ್ಥಿತಿ ನಿರ್ಮಾಣವಾಗಿದ್ದು ಲಾಯಿಲದಲ್ಲಿ ತಾಲೂಕು ಆಡಳಿತದಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ.
ಲಾಯಿಲ ಗ್ರಾಮದ ಪುತ್ರಬೈಲು ಮತ್ತು ಗುರಿಗಾನ ಪ್ರದೇಶದಲ್ಲಿ ನದಿ ಹಳ್ಳಗಳ ನೀರು ಮನೆಗಳಿಗೆ ನುಗ್ಗಿದೆ. ಇಲ್ಲಿ ಗದ್ದೆ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಮನೆಗಳಿಗೆ ಇನ್ನಷ್ಟು ನೀರು ನುಗ್ಗುವ ಅಪಾಯವಿದ್ದು ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನುವಾಸಿಗಳಿಗೆ ಕಾಳಜಿ ಕೇಂದ್ರಗಳಿಗೆ ತೆರಳುವಙತೆ ಸೂಚಿಸಲಾಗಿದೆ. ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಸಹಾಯಕ ಕೃಷಿ ನಿರ್ದೇಶಕರಾದ ರಂಜಿತ್ ಕುಮಾರ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಕೆಲ ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಸುಮಾರು14 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಆಯಿಲದಲ್ಲಿ ರಸ್ತೆ ಕುಸಿತ
ಆಯಿಲ ಎಂಬಲ್ಲಿ ರಸ್ತೆಯ ಎರಡೂ ಬದಿಗಳು ಕುಸಿದುದ್ದು ವಾಹನ ಸಂಚಾರ ಅಸಾಧ್ಯವಾಗಿದೆ. ರಸ್ತೆ ಬದಿಕುಸಿದ ಹಿನ್ನಲೆಯಲ್ಲಿ ಮರಳಿನ ಚೀಲದಿಂದ ತಡೆಗೋಡೆ ನಿರ್ಮಿಸಲಾಗಿತ್ತು ಆದರೆ ಮಳೆಗೆ ಮರಳಿನ ಚೀಲಗಳು ಕೊಚ್ವಿ ಹೋಗಿದ್ದು ಇಡೀ ರಸ್ತೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇನ್ನೊಂದು ಬದಿಯಿಂದ ಗುಡ್ಡವೂ ರಸ್ತೆಯ ಮೇಲೆ ಕುಸಿದು ಬಿದ್ದಿದೆ.
ಇದರಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ತಡೆ ಗಿಡಿಯಲಾಗಿದೆ.