ಬೆಳ್ತಂಗಡಿ; ತುಳು ನಾಡಿನ ಹುರಿ ಹಗ್ಗ ಎಷ್ಟು ಗಟ್ಟಿಯೋ ತುಳುವರು ಕೂಡಾ ಅಷ್ಟೇ ಗಟ್ಟಿವಂತರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು
ಅವರು ಇಂದು ಬೆಳ್ತಂಗಡಿಯ ಲ್ಯಾಲ ಸಂಗಮ ಹಾಲಲ್ಲಿ ಸಂಗಾತಿ ಗುಂಪು ಯೋಜನೆ (ರಿ) ಬೆಳ್ತಂಗಡಿ ಇದರ ನೇತೃತ್ವದಲ್ಲಿ ನಡೆದ ರೈತ ಕಾರ್ಮಿಕರ ಆಟೊಯಲ್ಲೊಂದು ದಿನ ಸಂಗಾತಿ ಮಹಾಸಂಗಮವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ತುಳು ನಾಡಿನ ಮಣ್ಣಿನ ಮಹತ್ವವನ್ನು ತಿಳಿಸಿದ ಅವರು ನೆಲವನ್ನು ಬಿಡಬೇಡ ಮಗನೇ ಎಂದು ತಾಯಿ ಹೇಳಿರುವುದನ್ನು ನೆನಪಿಸಿದರು. ಮುಂದೆ ಅವರು ಬಬ್ಬರಿಯ ದೈವ್ವವನ್ನು ಪ್ರಸ್ತಾಪಿಸಿ ಹಿಂದು ಮುಸ್ಲಿಂರ ಐಕ್ಯ ದೈವದ ಮಹತ್ವನ್ನು ಸಾರಿ ಈ ರೀತಿಯ ತುಳುವರ ಸೌಹಾರ್ಧ ಆದರ್ಶವನ್ನು ಎತ್ತಿ ಹಿಡಿಯುವುದು ಇಂದಿನ ಅನಿವಾರ್ಯವಾಗಿದೆ ಎಂದರು. ಈ ಸೌಹಾರ್ಧತೆಯೇ ತುಳುನಾಡಿನ ಮಣ್ಣಿನ ಗುಣವಾಗಿದ್ದು ಇದಕ್ಕೆ ವಿರುದ್ದ ನಡೆಯೇ ನಮ್ಮ ತುಳು ಸಂಸ್ಕೃತಿಗೆ ಬಂದಿರುವ ಅಪಾಯ ಎಂದು ಎಚ್ಚರಿಸಿದರು
ಮುಖ್ಯ ಅಥಿತಿಗಳಾಗಿ ಮಾತಾಡಿದ ಸಿಪಿಐಎಂ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿ ಪಳ್ಳ ಅವರು ಇಂದಿನ ಮಾರಿ ತೊಲಗಿಸಲು ಅಂದರೆ ಸಮಸ್ಯೆಗಳ ಪರಿಹರಿಸಿಕೊಳ್ಳಲು ಅಂದಿನ ಆಟಿಯ ಕಳೆಂಜಗಳು ಇಂದು ನಾವಾಗ ಬೇಕು ಆ ಮೂಲಕ ಅನ್ಯಾಯದ ವಿರುದ್ದ ದುಡಿಯುವ ಜನರ ಧ್ವನಿ ಮತ್ತೆ ಮೊಳಗುವಂತಾಗಲಿ ಎಂದರು
ಪ್ರಸ್ತಾವಿಕವಾಗಿ ಮಾತಾಡಿದ ಸಭೆಯ ಅದ್ಯಕ್ಷರಾದ ಬಿ.ಎಂ.ಭಟ್ ಅವರು ನಾವು ಅಜ್ಞಾನದತ್ತ ಸಾಗದೇ ನಮ್ಮ ಬದುಕು ನಾಶವ ತಡೆಯುವತ್ತ, ಬೆಲೆ ಏರಿಕೆ, ನಿರುದ್ಯೋಗ, ವೇತನ ಕಡಿತ, ಶೋಷಣೆಯ ವಿರುದ್ದ ಧ್ವನಿ ಎತ್ತುವವರಾಗೋಣ . ಅದುವೇ ಸಂಗಾತಿ ಮಹಾ ಸಂಗಮದ ಮುಖ್ಯ ಗುರಿಯಾಗಿದೆ ಎಂದರು.
ಕಾಂಗ್ರೇಸ್ ಮುಖಂಡರಾದ ರಕ್ಷಿತ್ ಶಿವರಾಂ ಅವರು ಸರಕಾರದ ಸಾಧನೆಗಳ ವಿವರಿಸಿ, ಕಾರ್ಮಿಕರ ಪರವಾದ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ರೈತ ಮುಖಂಡರಾದ ಪಾಂಗಳ ಲಕ್ಷ್ಮಣ ಗೌಡ, ಗುರುನಾರಾಯಣ ಸೇವಾ ಸಂಘದ ಅದ್ಯಕ್ಷರಾದ ಜಯವಿಕ್ರಮ, ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘದ ಅದ್ಯಕ್ಷರಾದ ಈಶ್ವರಿ ಶಂಕರ್ ಮೊದಲಾದವರು ಮಾತಾಡಿದರು.
ಬೆಳ್ತಂಗಡಿ ತಾಲೂಕು ಬೀಡಿಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿದರು ಸಂಘದ ಉಪಾದ್ಯಕ್ಷರಾದ ಪುಷ್ಪಾ ವಂದಿಸಿದರು. ಸಿಪಿಐಎಂ ನಾಯಕ ಶ್ಯಾಮ ರಾಜ್ ಪಟ್ರಮೆ ಕಾರ್ಯಕ್ರಮ ನಿರ್ವಹಣೆ ಮಾಡಿಸದರು ಕುಮಾರಿ ಖುಷಿ ಸಂದಿ ಹೇಳುವ ಮೂಲಕ ಪ್ರಾರಂಭವಾದ ಕಾರ್ಯಕ್ರಮವನ್ನು ಪುರುಷೋತ್ತಮ ಬಿಳಿಮಲೆಯವರು ಚೆನ್ನೆ ಮಣೆಗೆ ಕಾಯಿ ಹಾಕುವ ಮೂಲಕ ಉದ್ಘಾಟಿಸಿದರು. ತರುವಾಯ ಭಾಷಣಗಳ ಮದ್ಯೆ ಯಕ್ಷಗಾನ ಕುಣಿತ, ಭಾಗವತಿಕೆ, ಆಟಿಕಳೆಂಜ, ಕಂಗೀಲು, ಸಾವುಕೋಲ, ದುಡಿ ಮೊದಲಾದ ಕೆಲವು ನಮ್ಮ ಸಂಸ್ಕೃತಿಯ ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ಸಿಪಿಐಎಂ ಮುಖಂಡರುಗಳಾದ ಧನಂಜಯ ಗೌಡ, ಲೋಕೇಶ್ ಕುದ್ಯಾಡಿ, ಜಯರಾಮ ಮಯ್ಯ, ರೈತ, ಕಾರ್ಮಿಕ ಸಾಮೂಹಿಕ ಸಂಘಟನೆಗಳ ಮುಖಂಡರುಗಳಾದ ಕಿರಣ ಪ್ರಭಾ, ಕುಮಾರಿ, ರಾಮಚಂದ್ರ, ಅಭಿಷೇಕ್, ವಿನುಶರಮಣ, ಸಾತ್ವಿಕ್, ಯುವರಾಜ್, ಮೊದಲಾದವರು ಉಪಸ್ತಿತರಿದ್ದರು. ಹಿರಿಯರಾದ ಸುಂದರ ಶೆಟ್ಟಿ ಮೂಡಬಿದ್ರೆ, ಬಾಬು ಪಿಲಾರ್ ಉಳ್ಳಲಾ, ಡಾಗಯ ಗೌಡ ಪಾಂಗಳ, ವಿಜಿ ಎಂ ಜೋಸೆಫ್, ಜನಾರ್ಧನ ಆಚಾರ್ಯ, ದಿನೇಶ್ ಮಾಚಾರು, ಅಶ್ವಿತ, ಅಧಿತಿ, ಗೀತಾ ಶೆಟ್ಟಿ, ಸುಜಾತ, ಕುಸುಮ ಮಾಚಾರು, ಪ್ರೇಮ ಕಳೆಂಜ, ಮಹಮ್ಮದ್ ಅನಸ್, ಡೊಂಬಯ ಗೌಡ, ಉಷಾ ಕಡ್ಯ, ವಸಂತ ಟೈಲರ್, ಕೇಶವ ಪದ್ಮುಂಜ, ಶಂಕರ್, ಶ್ರೀಧರ ಮುದ್ದಿಗೆ, ನೀಲೇಶ್ ಪೆರಿಂಜೆ, ಫಾರೂಕು ಮಡಂಜೋಡಿ, ಚೋಮ ಪಾದೆಜಾಲು, ಸುಂದರಿ ಕುತ್ಲೂರು, ಪ್ರಭಾವತಿ ಲ್ಯಾಲ, ಗಣೇಶ್ ಪ್ರಸಾದ್, ಅಟೋ ರಝಾಕ್, ರಮೆಶ ಮುದ್ದಿಗೆ, ಬಿಸಿಯೂಟದ ಜಾನಕಿ, ವೇದಾವತಿ, ಮೊದಲಾದವರು ಉಪಸ್ತಿತರಿದ್ದರು ಮದ್ಯಾಹ್ನ ಆಟಿದ ಊಟದ ಬಳಿಕ ಸಂಗಾತಿ ಸ್ವಸಹಾಯ ಗುಂಪುಗಳ ಸದಸ್ಯರ ಮಕ್ಕಳಿಂದ ವಿವಿವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಒಂದು ತಿಂಗಳಿಂದ ನಡೆದ ಪ್ರತಿಭಾ ಪ್ರದರ್ಶನ ಸ್ಪರ್ದೇಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.