ಬೆಳ್ತಂಗಡಿ; ನೆರಿಯ ಗ್ರಾಮದ ರಸ್ತೆಯಲ್ಲಿ ಬಾಂದಾಡ್ಕ ಪ್ರದೇಶದಲ್ಲಿ ಅಣಿಯೂರು ನದಿಯಲ್ಲಿ ನಿನ್ನೆ ಒಪ್ಪಿಂದೊಮ್ಮೆಲೆ ನೀರು ಉಕ್ಕಿ ಹರಿದು ರಸ್ತೆಯಲ್ಲಿ ಬರುತ್ತಿದ್ದ ಕಾರೊಂದು ನೀರಿನಲ್ಲಿ ಮುಳುಗಿರುವ ಘಟನೆ ನಡೆದಿದೆ.
ಚಾರ್ಮಾಡಿ ಗ್ರಾಮದ ಕಕ್ಕಿಂಜೆ ನಿವಾಸಿ ಸುಭೀಶ್ ಎಂಬವರು ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬರುವಾಗ ರಾತ್ರಿ 9.30 ಕ್ಕೆ ಬಾಂದಡ್ಕ ಪ್ರದೇಶದಲ್ಲಿ ಅಣಿಯೂರು ಹೊಳೆ ಏಕಾಏಕಿ ಉಕ್ಕಿ ಹರಿದಿದೆ. ನೀರಿನ ಮಟ್ಟ ಏರಿಕೆಯಾಗಿ ಕಾರು ಮುಳುಗಿದೆ. ಕಾರು ಮುಂದಕ್ಕೆ ಚಲಿಸಲಾಗದ ಸ್ಥಿತಿ ಬಂದಿದ್ದು ಪ್ರಚಾಹಕ್ಕೆ ಸಿಲುಕುವ ಭೀತಿ ಎದುರಾಗಿ ಕಾರಿನಲ್ಲಿ ಇದ್ದವರು ಬೊಬ್ಬೆ ಹಾಕಿದ್ದಾರೆ ಈವೇಳೆ ಕೇಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಟಾಜೆ ನಿವಾಸಿಯಾದ ಸುದರ್ಶನ ರವರು ಇವರ ಸಹಾಯಕ್ಕೆ ಧಾವಿಸಿದ್ದು ಕಾರಿನಲ್ಲಿ ಸಿಲುಕಿದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐದು ಜನರನ್ನು ಕಾರಿನಿಂದ ಹೊರ ಬರಲು ಸಹಾಯ ಮಾಡಿದ್ದಾರೆ ಸ್ಥಳೀಯರ ಸಹಕಾರದಿಂದ ಕಾರನ್ನು ಹಗ್ಗದ ಮೂಲಕ ಮರವೊಂದಕ್ಕೆ ಕಟ್ಟಿ ನದಿಯಲ್ಲಿ ಕೊಚ್ಚಿ ಹೋಗುವುದನ್ನು ತಪ್ಪಿಸಿದ್ದಾರೆ.
ಕಳೆದ 10-15 ದಿನಗಳಿಂದ ನೆರಿಯ ಗ್ರಾಮಾದ್ಯಾಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು , ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ 3 -4 ಬಾರಿ ಇಲ್ಲಿನ ರಸ್ತೆ ಮುಳುಗಿ ರಸ್ತೆ ಸಂಚಾರ ಅಡಚಣೆ ಉಂಟಾಗಿತ್ತು. ಆಗಾಗ ನದಿ ನೀರಿನಲ್ಲಿಏರಿಕೆ ಆಗುತ್ತಿದ್ದು ನದಿ ದಾಡುವ ಜನರಲ್ಲಿ ಭಯ ಮೂಡಿಸುತ್ತಿದೆ