ಬೆಳ್ತಂಗಡಿ; ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ವಾರ್ಷಿಕ ಸಭೆಯು ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ಇಸ್ಮಾಲಿ ಐ ಬಿ ಅಧ್ಯಕ್ಷತೆಯಲ್ಲಿ ನಡೆಯಿತು. 2023-24ನೇ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿಯಾದ ಹನೀಫ್ ವರ್ಷಾ ಮಂಡಿಸಿದರು.
ನೂತನ ಸಾಲಿನ ಅಧ್ಯಕ್ಷರಾಗಿ ರಶೀದ್ ಸಂಜಯ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಕುದ್ರಡ್ಕ, ಉಪಾಧ್ಯಕ್ಷರಾಗಿ ರಿಯಾಝ್ ಹೊಸಬೆಟ್ಟು, ಜೊತೆಕಾರ್ಯದರ್ಶಿಯಾಗಿ ಶೈರೋಜ್ ಉದಯ ನಗರ, ಕೋಶಾಧಿಕಾರಿಯಾಗಿ ಇಸ್ಮಾಲಿ ಹೊಸಬೆಟ್ಟು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಕ್ಬರ್ ಬೆಳ್ತಂಗಡಿ, ಹನೀಫ್ ವರ್ಷಾ, ಶಫೀರ್ ಸಂಜಯ ನಗರ, ಶಾಯಿದ್ ಉದಯ ನಗರ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು. ಅಕ್ಬರ್ ಬೆಳ್ತಂಗಡಿಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.