ಬೆಳ್ತಂಗಡಿ; ಮೂಡುಕೋಡಿ ವೈನಗ ಶಾಪ್ ನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ನಿಟ್ಟಡೆ ಗ್ರಾಮದ ನಿವಾಸಿ ಪ್ರಸಾದ ಯಾನೆ ಬಾಡು ಪ್ರಸಾದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು ತಾನು ಮೋಹನ್ ಎಂಬವರೊಂದಿಗೆ ಮೂಡುಕೋಡಿ ಗ್ರಾಮದ ವೈನ್ ಶಾಪಿಗೆ ಬಂದಿದ್ದ ವೇಳೆ ಆರೋಪಿಗಳಾದ ವಸಂತ ಕೋಟ್ಯಾನ್ ಹಾಗೂ ಸಂತೋಷ್ ನಾರ್ಲ ಎಂಬವರು ಪ್ರಸಾದ್ ನನ್ನು ತಡೆದು ನಿಲ್ಲಿಸಿ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಹಲ್ಲೆಗೆ ಒಳಗಾದ ಪ್ರಸಾದ್ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ದೂರು ನೀಡಿದ್ದು ಅದರಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿಸಿದಂತೆ ವಸಂತ ಕೋಟ್ಯಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು ತನ್ನಮೇಲೆ ಹಾಗೂ ಸಂತೋಷ್ ಎಂಬವರ ಮೇಲೆ ಪ್ರಸಾದ್ ಯಾನೆ ಬಾಡು ಪ್ರಸಾದ್ ಎಂಬಾತ ಅವಾಚ್ಯ ಶಬ್ದಗಳಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಅದರಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ