Home ಬ್ರೇಕಿಂಗ್‌ ನ್ಯೂಸ್ ದಲಿತ ಚಳವಳಿಯ ಮುಚೂಣಿ ನಾಯಕ ಚಂದು ಎಲ್ ನಿಧನ

ದಲಿತ ಚಳವಳಿಯ ಮುಚೂಣಿ ನಾಯಕ ಚಂದು ಎಲ್ ನಿಧನ

1065
0

ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ (52) ಅವರು ಅಲ್ಪ ಕಾಲದ‌ ಅಸೌಖ್ಯದ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದ.ಕ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಚಂದು ಎಲ್ ಅವರು ಬೆಳ್ತಂಗಡಿ ತಾಲೂಕು ಪಂಚಾಯತು ಉಪಾಧ್ಯಕ್ಷರಾಗಿ, ಗೇರು ಅಭಿವೃದ್ಧಿ ನಿಗಮದ ನಿರ್ದೇಶಕ ರಾಗಿ ಕಾರ್ಯನಿರ್ವಹಿಸಿದ್ದರು ಕಾರ್ಯನಿರ್ವಹಿಸಿದ್ದರು
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.

ದ.ಕ ಜಿಲ್ಲೆಯ ದಲಿತ ಪರ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಚಂದು ಎಲ್ ಅವರು ತನ್ನ ಹೈಸ್ಕೂಲ್ ಶಿಕ್ಷಣ ಬಳಿಕ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ ಮೂಲಕ ತನ್ನ ಸಾಮಾಜಿಕ ಸೇವೆಯನ್ನು ಆರಂಭಿಸಿದರು. ಅಲ್ಲಿ ಹೋರಾಟದ ಮನೋಭಾವ ಬೆಳೆಸಿಕೊಂಡ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ನಂತರ ದಲಿತ ಸಂಘರ್ಷ ಸಮಿತಿಯ ಸಂಪರ್ಕಕ್ಕೆ ಬಂದು ತನ್ನ ಇಡೀ ಜೀವನವನ್ನು ದಲಿತ ಸಮುದಾಯದ ಏಳ್ಗೆಗಾಗಿ ಮುಡಿಪಾಗಿಟ್ಟರು. ಬೆಳ್ತಂಗಡಿ ತಾಲೂಕಿನಲ್ಲಿ ಡಿ.ಸಿ ಮನ್ನಾ ಜಮೀನಿಗಾಗಿನ ಹೋರಾಟ,
ನಿಡ್ಲೆ ದೈವಸ್ಥಾನದ ಸಾರ್ವಜನಿಕ ಊಟದ ಪಂಕ್ತಿಯಿಂದ ದಲಿತ ಯುವತಿಯನ್ನು ಬಲಾತ್ಕಾರವಾಗಿ ಎಬ್ಬಿಸಿದ ಘಟನೆ ಮುಂದಿಟ್ಟು ನಡೆದ ಐತಿಹಾಸಿಕ ಹೋರಾಟಗಳ ನೇತೃತ್ವವನ್ನು ವಹಿಸಿದ್ದರು. ಜೊತೆಗೆ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ನೂರಾರು ದಲಿತ, ಸಾಮಾಜಿಕ ಹೋರಾಟಗಳಿಗೆ ಮುಂಚೂಣಿ ನಾಯಕತ್ವ ವಹಿಸಿದ್ದರು.
ತಾಲೂಕಿನಲ್ಲಿ ಬಿ.ಎಸ್.ಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಚಂದು ಎಲ್ ಅವರು ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.
ಜನತಾದಳ ಪಕ್ಷದಿಂದ
ಬೆಳ್ತಂಗಡಿ ತಾಲೂಕು ಪಂಚಾಯತ್ ನ ಸದಸ್ಯರಾಗಿ ಆಯ್ಕೆಯಾದ ಅವರು ತಾ.ಪಂ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಅವರು 2013 ರಿಂದ 2018 ರ ತನಕ ಕರ್ನಾಟಕ ರಾಜ್ಯ ಸರ್ಕಾರದ ಗೇರು ಅಭಿವೃದ್ಧಿ ನಿಗಮದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಶಾಸಕ ವಸಂತ ಬಂಗೇರ ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬಂದ ಚಂದು ಎಲ್ ಅವರು ಕಳೆದ ಎರಡು ದಶಕದಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯೂ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ಹಿಸಿದರು.

ದಲಿತ ಸಂಘರ್ಷ ಸಮಿತಿಯ ವಿವಿಧ ಪದಾಧಿಕಾರಿಗಳ ಜವಾಬ್ದಾರಿ ವಹಿಸಿದ್ದ ಅವರು ಬಳಿಕ ಮಾವಳ್ಳಿ ಶಂಕರ್ ನೇತೃತ್ವದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ ಜೊತೆಗೆ ಗುರುತಿಸಿಕೊಂಡು ಬೆಳ್ತಂಗಡಿ ತಾಲೂಕು ಘಟಕದ ಸಂಚಾಲಕರಾಗಿ , ಜಿಲ್ಲಾ ಸಂಚಾಲಕರಾಗಿ , ಮೈಸೂರು ವಿಭಾಗದ ಸಂಘಟನಾ ಸಂಚಾಲಕರಾಗಿ , ಪ್ರಸ್ತುತ ರಾಜ್ಯ ಸಂಘಟನಾ ಸಂಚಾಲಕರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಅವರು ಉತ್ತಮ ವಾಗ್ಮಿಯಾಗಿದ್ದರು. ಕೋಮುವಾದಿ ವಿರೋಧಿ ಹೋರಾಟಗಳಲ್ಲೂ ಗುರುತಿಸಿಕೊಂಡಿದ್ದ ಅವರು ಸಂವಿಧಾನ ಸಂರಕ್ಷಣೆಗಾಗಿ ಹಲವಾರು ಹೋರಾಟಗಳ ನೇತೃತ್ವ ವಹಿಸಿದ್ದರು.
ಮೊದಲಿಗೆ ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿ , ಕಮ್ಯೂನಿಸ್ಟ್‌ ಪಕ್ಷದ ನಾಯಕರಾಗಿದ್ದ ಕೆ.ವಿ ರಾವ್ ಉಜಿರೆ (ಯಳಚಿತ್ತಾಯ) ಅವರೊಂದಿಗೆ ಗುರುತಿಸಿಕೊಂಡು ಬಳಿಕ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರರ ಗರಡಿಯಲ್ಲಿ ಪಳಗಿದ ಅವರು ಅನ್ಯಾಯ, ಅಸಮಾನತೆ , ಅಸ್ಪೃಶ್ಯತೆ , ಜಾತಿ ತಾರತಮ್ಯವನ್ನು ಸಹಿಸುತ್ತಿರಲಿಲ್ಲ. ಡಿಸಿ ಮನ್ನಾ ಜಮೀನು ಅರ್ಹ ದಲಿತರಿಗೆ ಸಿಗಬೇಕು ಎಂಬ ಭೂ ಹೋರಾಟದಲ್ಲಿ ಇಡೀ ರಾಜ್ಯವೇ ಹಿಂತಿರುಗಿ ನೋಡುವಂತೆ ಮಾಡಿದ ಹಲವಾರು ಹೋರಾಟಗಳಿಗೆ ನೇತೃತ್ವ ನೀಡಿದ್ದರು.

LEAVE A REPLY

Please enter your comment!
Please enter your name here