ಬೆಳ್ತಂಗಡಿ; 2024-25ನೇ ಸಾಲಿಗೆ ಇಲಾಖಾ ಯೋಜನೆಗಳಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ/ ಪುನಶ್ಚೇತನ/ ಉತ್ಕೃಷ್ಟ ಗುಣಮಟ್ಟದ ಉತ್ಪಾದನೆ/ ಸಂಸ್ಕರಣೆ ಇತ್ಯಾದಿ ಚಟುವಟಿಕೆಗಳನ್ನು ಕೈಗೊಳ್ಳುವ ರೈತರಿಗೆ ಪ್ರೋತ್ಸಾಹಧನ ನೀಡಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನಿಷ್ಠ ಅರ್ಧ ಎಕ್ರೆಯಿಂದ 5 ಎಕ್ರೆವರೆಗೆ ಕಾಳುಮೆಣಸು, ಕೋಕೋ, ಗೇರು, ತಾಳೆಬೆಳೆ, ರಾಂಬೂಟಾನ್, ಡ್ರಾಗನ್ ಫ್ರುಟ್, ಮ್ಯಾಂಗೋಸ್ಟೀನ್, ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ದಾಲ್ಚಿನ್ನಿ(ಚಕ್ಕೆ) ಬೆಳೆಗಳ ಪ್ರದೇಶ ವಿಸ್ತರಣೆಗೆ (ಹೊಸ ತೋಟ) ಶೇ. 40 ರ ಸಹಾಯಧನ, ಕಾಳುಮೆಣಸು ಪುನಶ್ಚೇತನಕ್ಕೆ ಶೇ. 50 ಸಹಾಯಧನ, ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ ಸಹಾಯಧನ, ಜೇನು ಸಾಕಾಣಿಕೆ ಯೋಜನೆಯಡಿ ಜೇನುಪೆಟ್ಟಿಗೆ ಹಾಗೂ ಕುಟುಂಬ ಖರೀದಿಗೆ ಶೇ. 75 ಸಹಾಯಧನ ಇರುತ್ತದೆ.
ಕ್ಷೇತ್ರ ಮಟ್ಟದ ಗೋದಾಮು ನಿರ್ಮಾಣಕ್ಕೆ (ಶೇ. 50 ಸಹಾಯಧನ) 1 ಲಕ್ಷ ರೂ. ಸಹಾಯಧನ, ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕ ಶೇ. 40 ರಲ್ಲಿ 10 ಲಕ್ಷ ರೂ. ಸಹಾಯಧನ, ಅಣಬೆ ಉತ್ಪಾದನೆ ಘಟಕಕ್ಕೆ ಶೇ. 40 ರಂತೆ ಗರಿಷ್ಠ 8 ಲಕ್ಷ ರೂ. ಸಹಾಯಧನ, ಸೋಲಾರ್ ಪಂಪ್ ಅಳವಡಿಕೆಗೆ ಗರಿಷ್ಠ 1.50 ಲಕ್ಷ ರೂ. ಸಹಾಯಧನ, ಪ್ಯಾಕ್ ಹೌಸ್ ನಿರ್ಮಾಣಕ್ಕೆ ಗರಿಷ್ಠ 2 ಲಕ್ಷ ರೂ. ಸಹಾಯಧನ, ಸಂರಕ್ಷಿತ ಬೇಸಾಯ ಘಟಕ (ಪಾಲಿಹೌಸ್ ಮತ್ತು ನೆರಳು ಪರದೆ ಘಟಕಕ್ಕೆ) ಶೇ. 50 ರ ಸಹಾಯಧನ, ಹನಿ ನೀರಾವರಿ,, ತುಂತುರು ನೀರಾವರಿಗೆ ಶೇ. 75 ರಿಂದ 90 ರ ಸಹಾಯಧನ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆ ಹಾಗೂ ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಬಳಕೆ ಮಾಡುವ ಕೀಟನಾಶಕ/ ರೋಗ ನಾಶಕಗಳ ಖರೀದಿಗೆ ಶೇ.30 ರ ಸಹಾಯಧನ ಇರುತ್ತದೆ.
ಆಸಕ್ತ ರೈತರು ಪಹಣಿ(RTC), ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಗಳನ್ನು ದಿನಾಂಕ : 30-06-2024 ರೊಳಗೆ ಅರ್ಜಿಯೊಂದಿಗೆ ಬೆಳ್ತಂಗಡಿ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಕೋರಿದೆ. ವರ್ಗವಾರು, ಅರ್ಜಿಗಳ ಜೇಷ್ಠತೆಗನುಗುಣವಾಗಿ ತಾಲೂಕಿಗೆ ಹಂಚಿಕೆಯಾದ ಅನುದಾನದಂತೆ ಸಹಾಯಧನಕ್ಕೆ ಅರ್ಜಿಗಳನ್ನು ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಧಿಕಾರಿ ವರ್ಗದವರನ್ನು ಸಂಪರ್ಕಿಸಲು ಕೋರಿದೆ.
ಬೆಳ್ತಂಗಡಿ ಹೋಬಳಿ : ಶ್ರೀ ಮಹಾವೀರ ಶೇಬಣ್ಣವರ ನೇ. , ಮೊಬೈಲ್ ನಂ: 8123921087
ವೇಣೂರು ಹೋಬಳಿ : ಭೀಮರಾಯ ಸೊಡ್ಡಗಿ, ಮೊಬೈಲ್ ನಂ: 9741713598
ಕೊಕ್ಕಡ ಹೋಬಳಿ; ಮಲ್ಲಿನಾಥ ಬಿರಾದಾರ, ಮೊಬೈಲ್ ನಂ: 9986411477
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : ಕೆ.ಎಸ್. ಚಂದ್ರಶೇಖರ್, ಮೊಬೈಲ್ ನಂ: 9448336863
ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೆ.ಎಸ್. ಚಂದ್ರಶೇಖರ್
ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.