ಬೆಳ್ತಂಗಡಿ; ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದ.ಕ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಉಳ್ಳಾಲ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಗೆ ಮುನ್ನಡೆ ಲಭಿಸಿದೆ. ಉಳಿದಂತೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಉತ್ತಮ ರೀತಿಯ ಮುನ್ನಡೆಯನ್ನು ಪಡೆದು ಕೊಂಡಿದ್ದಾರೆ.
ನೋಟಾ ಪರವಾಗಿ ಅಭಿಯಾನ ನಡೆಸಲಾಗಿದ್ದರೂ ನಿರೀಕ್ಷೆಯ ಮತಗಳು ನೋಟಾಕ್ಕೆ ಲಭಿಸಿಲ್ಲ ಬೆಳ್ತಂಗಡಿಯಲ್ಲಿ ಮಾತ್ರ ನೋಟಾ ಆಂದೋಲನಕ್ಕೆ ಬೆಂಬಲ ವ್ಯಕ್ತವಾಗಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬ್ರಿಜೇಶ್ ಚೌಟ ಅವರು 1,01,408 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್ ಅಭ್ಯರ್ಥಿ 78,101ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ. ಬೆಳ್ತಂಗಡಿಯಲ್ಲಿ ಬಿಜೆಪಿ 23,307 ಮತಗಳ ಮುನ್ನಡೆ ಲಭಿಸಿದೆ. ಇಲ್ಲಿ ನೋಟಾಕ್ಕೆ 7,691ಮತಗಳು ಲಭಿಸಿದೆ.
ಮೂಡಬಿದ್ರೆಯಲ್ಲಿ ಬಿಜೆಪಿಗೆ 92496 ಮತಗಳು ಹಾಗೂ ಕಾಂಗ್ರೆಸ್ ಪಕ್ಷಕ್ಕೆ 64,308 ಮತಗಳು ಲಭಿಸಿದ್ದು 28,188 ಮತಗಳ ಮುನ್ನಡೆ ಲಭಿಸಿದೆ ಇಲ್ಲಿ 2166 ಮತಗಳು ನೋಟಾಕ್ಕೆ ಲಭಿಸಿದೆ.
ಮಂಗಳೂರು ನಾರ್ತ್ ಕ್ಷೇತ್ರದಲ್ಲಿ ಬಿಜೆಪಿಗೆ 108137 ಮತಗಳು ಹಾಗೂ ಕಾಂಗ್ರೆಸ್ ಗೆ 76,716 ಮತಗಳು ಮಾತ್ರ ಲಭಿಸಿದ್ದು 31,421 ಮತಗಳ ಮುನ್ನಡೆಯನ್ನು ಬಿಜೆಪಿ ಗಳಿಸಿಕೊಂಡಿದೆ. ಇಲ್ಲಿ 2019ಮತಗಳು ನೋಟಾಕ್ಕೆ ಚಲಾವಣೆಯಾಗಿದೆ.
ಮಂಗಳೂರು ಸೌತ್ ಕ್ಷೇತ್ರದಲ್ಲಿ 95531 ಮತಗಳು ಬಿಜೆಪಿಗೆ ಲಭಿಸಿದರೆ ಕಾಂಗ್ರೆಸ್ ಪಕ್ಷಕ್ಕೆ 71187 ಮತಗಳು ಲಭಿಸಿದ್ದು 24,343 ಮತಗಳ ಮುನ್ನಡೆ ಬಿಜೆಪಿಗೆ ಲಭಿಸಿದೆ. ಇಲ್ಲಿ ಕೇವಲ 1551 ಮತಗಳು ಮಾತ್ರ ನೋಟಾಕ್ಕೆ ಲಭಿಸಿದೆ.
ಉಳ್ಳಾಲದಲ್ಲಿ (ಮಂಗಳೂರು) ಮಾತ್ರ ಕಾಂಗ್ರೆಸ್ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ ಇಲ್ಲಿ ಕಾಂಗ್ರೆಸ್ ಗೆ 97,933 ಮತಗಳು ಲಭಿಸಿದ್ದು ಬಿಜೆಪಿಗೆ 64,870 ಮತಗಳು ಲಭಿಸಿದ್ದು ಕಾಂಗ್ರೆಸ್ ಗೆ 33,063 ಮತಗಳ ಮುನ್ನಡೆ ಲಭಿಸಿದೆ. ಇಲ್ಲಿ 892 ಮತಗಳು ನೋಟಾಕ್ಕೆ ಲಭಿಸಿದೆ.
ಬಂಟ್ವಾಳದಲ್ಲಿ ಸಮಬಲದ ಹೋರಾಟ ನಡೆದಿದ್ದು ಬಿಜೆಪಿಗೆ ಕೇವಲ 5,993ಮತಗಳ ಮುನ್ನಡೆ ಲಭಿಸಿದೆ. ಇಲ್ಲಿ ಬಿಜೆಪಿಗೆ 94,679 ಮತಗಳು ಬಂದರೆ ಕಾಂಗ್ರೆಸ್ ಗೆ 88,686 ಮತಗಳು ಲಭಿಸಿದೆ. ಇಲ್ಲಿ ನೋಟಾಕ್ಕೆ 2353ಮತಗಳು ಲಭಿಸಿದೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿ ದೊಡ್ಡ ಮುನ್ನಡೆಯನ್ನು ಪಡೆದುಕೊಂಡಿದೆ. ಇಲ್ಲಿ 100247 ಮತಗಳು ಲಭಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಕೇವಲ 71557ಮತಗಳು ಲಭಿಸಿದೆ. ಇಲ್ಲಿ ಬಿಜೆಪಿ 28,690ಮತಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ. ಇಲ್ಲಿ ನೋಟಾಕ್ಕೆ 2302ಮತಗಳು ಲಭಿಸಿದೆ. ಸುಳ್ಯದಲ್ಲಿ ಬಿಜೆಪಿಗೆ 102762 ಮತಗಳನ್ನು ಪಡೆದುಕೊಂಡಿದ್ದು ಕಾಂಗ್ರೆಸ್ ಗೆ 63,615 ಮತಗಳು ಲಭಿಸಿದ್ದು ಬಿಜೆಪಿಗೆ 39,147 ಮತಗಳ ಮುನ್ನಡೆ ಲಭಿಸಿದೆ. ಇಲ್ಲಿ ನೋಟಾಕ್ಕೆ 4541 ಮತಗಳು ಲಭಿಸಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಮತಗಳ ಮುನ್ನಡೆ ಸುಳ್ಯದಲ್ಲಿ ಬಿಜೆಪಿಗೆ ಲಭಿಸಿದೆ. ಅಂಚೆ ಮತಗಳಲ್ಲಿ ಬಿಜೆಪಿಗೆ 4002ಮತಗಳು ಹಾಗೂ 2821 ಮತಗಳು ಕಾಂಗ್ರೆಸ್ ಗರ ಲಭಿಸಿದೆ. 61ಮತಗಳು ನೋಟಾಕ್ಕೆ ಚಲಾವಣೆಯಾಗಿದೆ.
Home ಬ್ರೇಕಿಂಗ್ ನ್ಯೂಸ್ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಉಳ್ಳಾಲದಲ್ಲಿ ಕಾಂಗ್ರೆಸ್ ಮುನ್ನಡೆ, ನೋಟಾಕ್ಕೆ ಬೆಳ್ತಂಗಡಿಯಲ್ಲಿ ಮಾತ್ರ ಬೆಂಬಲ