ಬೆಳ್ತಂಗಡಿ: ಬೆಳ್ತಂಗಡಿ ಹಳೇಕೋಟೆ ಸಮೀಪ ಪೆಟ್ರೋಲ್ ಪಂಪು ಬಳಿ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಮೃತಪಟ್ಟ ಘಟನೆ ಜೂ.1 ರಂದು ಮಧ್ಯಾಹ್ನ ನಡೆದಿದೆ.
ಬೈಕ್ ಸವಾರ ಬೆಳ್ತಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದು ಬೈಕ್ ಟಿಪ್ಪರ್ ನ ಟಯರ್ನ ಅಡಿಗೆ ಸಲುಕಿಕೊಂಡು ನುಜ್ಜುಗುಜ್ಜಾಗಿಧ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಆವೇಳೆಗೆ ಆತ ಮೃತಪಟ್ಟಿದ್ದ. ಮೃತ ಬೈಕ್ ಸವಾರನ ಬಗ್ಗೆ ಇನ್ನಷ್ಟೆ ಮಾಹಿತಿ ತಿಳಿದುಬರಬೇಕಾಗಿದೆ
ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.