Home ಸ್ಥಳೀಯ ಸಮಾಚಾರ ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಸ್ಕಾಲರ್ಶಿಪ್ ಮಕ್ಕಳ ಸಭೆ

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಸ್ಕಾಲರ್ಶಿಪ್ ಮಕ್ಕಳ ಸಭೆ

220
0


ಬೆಳ್ತಂಗಡಿ; ಮಂಗಳೂರು ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆ ಇವರ ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಲ್ಲಿ ಧರ್ಮಜ್ಯೋತಿ ಸ್ಕಾಲರ್ಶಿಪ್ ಯೇಜನೆಯ ಮುಲಕ ಆಯ್ದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಲಭಿಸುತ್ತಿದ್ದು, ಫಲಾನುಭವಿಗಳ ಹಾಗೂ ಪೋಷಕರ ಸಭೆಯು ಮೇ 22 ರಂದು ಸಾಂತೋಮ್ ಟವರ್ ನಲ್ಲಿ ನಡೆಯಿತು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರರಾದ ವಂದನೀಯ ಫಾ. ಬಿನೋಯಿ ಎ.ಜೆ.ರವರು ಸ್ಕಾಲರ್ಶಿಪ್ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಅಂಕ ಗಳಿಸುವ ಮೂಲಕ ಜೀವನದಲ್ಲಿ ಯಶಸ್ಸನ್ನು ಪಡೆಯಲು ಪ್ರಯತ್ನಿಸಿ ಎಂದರು. ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆಯ ಸಿ. ಫಿಲೋಮಿನಾರವರು ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು. ಶ್ರೀಮತಿ ರೆನಿಟಾರವರು ವಿದ್ಯಾರ್ಥಿಗಳ ಪೋಷಕರಿಗೆ ಹಿತವಚನ ನುಡಿದರು. ಮಕ್ಕಳ ದಾನಿಗಳಿಗೆ ಕಾಗದ ಹಾಗೂ ಚಿತ್ರಕಲೆಯನ್ನು ಮಕ್ಕಳಿಂದ ಬರೆಸಲಾಯಿತು. ಮಕ್ಕಳಿಗೆ ಬ್ಯಾಗ್, ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಒಟ್ಟು 142 ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here