ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾವರು ಪೊಲೋಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಅವರನ್ನು ಬಂದಿಸಲು ಬೆಳ್ತಂಗಡಿ ಪೊಲೀಸರು ಹರೀಶ್ ಪೂಂಜ ಅವರ ಮನೆಗೆ ಆಗಮಿಸಿದ್ದು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮನೆಯತ್ತ ಧಾವಿಸಿದ್ದಾರೆ.
ಬೆಳ್ತಂಗಡಿ ಪೊಲೀಸರ ತಂಡ ಶಾಕರ ಮನೆಯಲ್ಲಿದ್ದು ಅವರನ್ನು ಬಂಧಿಸುವ ನಿರೀಕ್ಷೆಯಿದೆ. ಪೊಲೀಸ್ ಅಧಿಕಾರಿಗಳು ಮನೆಯ ಒಳಗೆ ಇದ್ದು ಮಾತುಕತೆ ನಡೆಯುತ್ತಿದೆ.
ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಕಾರ್ಯ ಕರ್ತರು ಆಗಮಿಸುತ್ತಿದ್ದು ಮನೆಗೆ ಬರುವ ರಸ್ತೆ ಬಹುತೇಕ ಬಂದ್ ಆದಂತಾಗಿದೆ. ಹೆಚ್ಚಿನ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದು ಸ್ಥಳದಲ್ಲಿ ಬಿಗುವಿನ ಸ್ಪರಿಸ್ಥಿತಿ ನಿರ್ಮಾಣವಾಗಿದೆ