Home ಬ್ರೇಕಿಂಗ್‌ ನ್ಯೂಸ್ ಬೆಳ್ತಂಗಡಿಯಲ್ಲಿ ಬೀಡಿ ಕಾರ್ಮಿಕರ ಪ್ರತಿಭಟನೆ ರಾತ್ರಿಯೂ ಮುಂದುವರಿದ ಧರಣಿ

ಬೆಳ್ತಂಗಡಿಯಲ್ಲಿ ಬೀಡಿ ಕಾರ್ಮಿಕರ ಪ್ರತಿಭಟನೆ ರಾತ್ರಿಯೂ ಮುಂದುವರಿದ ಧರಣಿ

387
0

ಬೆಳ್ತಂಗಡಿ; ಭಾರತ್ ಬೀಡಿ ಬೆಳ್ತಂಗಡಿ ಬ್ರಾಂಚ್ ಅನ್ನು ಮುಚ್ಚುಲು ಮುಂದಾಗಿರುವ ಮಾಲಕರ ನೀತಿಯನ್ನು ವಿರೋಧಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿಯ ಎದುರು ಸಿಐಡಿಯು ನೇತೃತ್ವದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಗುರುವಾರ ಆರಂಭಗೊಂಡಿದೆ.
ಬೆಳ್ತಂಗಡಿ ತಾಲೂಕು ಬೀಡಿ ಕಾರ್ಮಿಕರ ಸಂಘ (ಸಿಐಟಿಯು)
ಭಾರತ್ ಬೀಡಿಗುತ್ತಿಗೆದಾರರ ಸಂಘ, ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆಕೆಲಸ ಮಾಡುವವರ ಸಂಘದ ಸಹಕಾರದೊಂದಿಗೆ ಅನಿರ್ಧಿಷ್ಟ ಮುಷ್ಕರ ಆರಂಭಗೊಂಡಿದ್ದುನೂರಾರು ಸಂಖ್ಯೆಯಲ್ಲಿ ಬೀಡಿ ಕಾರ್ಮಿಕರು ಧರಣಿಯಲ್ಲಿ ಭಾಗಿಗಳಾಗುತ್ತಿದ್ದಾರೆ.
ಅನಿರ್ಧಿಷ್ಟ ಮುಷ್ಕರದ ಉದ್ಘಾಟನೆಯನ್ನು ಬೀಡಿ ಫೆಡರೇಶನ್ ನ ರಾಜ್ಯ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ನೆರವೇರಿಸಿ ಮಾತನಾಡುತ್ತಾ ಯಾವುದೇ ಕಾರಣಕ್ಕೂ ಕಂಪೆನಿ ಬಂದ್ ಮಾಡಲು ಬಿಡುವುದಿಲ್ಲ ಕಂಪೆನಿ ಮುಚ್ಚುವ ಮೂಲಕ ಬೀಡಿ ಕಾರ್ಮಿಕರನ್ನು ಬೀದಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ ನಮ್ಮ ಬೇಡಿಕೆ ಈಡೇರುವ ವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದರು.

ಹೋರಟಕ್ಕೆ ರಕ್ಷಿತ್ ಶಿವರಾಂ ಬೆಂಬಲ


ಕೆ.ಪಿ.ಸಿ‌.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಜಿಲ್ಲೆಯ ಅರ್ಥಿಕತೆಯನ್ನು ಕಟ್ಟಿದವರು ಬೀಡಿ ಕಾರ್ಮಿಕರಾಗಿದ್ದಾರೆ.ಅವರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಂಪೆನಿಯನ್ನು ಮುಚ್ಚಬೇಕಾದರೆ ಅದಕ್ಕೆ ಸರಕಾರದ ಅನುಮತಿ ಅಗತ್ಯವಾಗಿದೆ. ಕಂಪೆನಿ ಮುಚ್ವಿದರೆ ಅದರಿಂದಾ ಸಾವಿರಾರು ಜನರಿಗೆ ಸಮಸ್ಯೆಯಾಗುತ್ತದೆ‌. ಇದನ್ನು ಮನಗಂಡು ಈಗಾಗಲೇ ಸಂಬಂಧಿಸಿದ ಸಚಿವರಲ್ಲಿ ಮಾತುಕತೆ ನಡೆಸಿದ್ದೇವೆ ಮುಂದೆಯೂ ಸರಕಾರದ ಮಟ್ಟದಲ್ಲಿ ಕಾರ್ಮಿಕರಿಗೆ ನ್ಯಾಯಕೊಡಿಸುವ ಪ್ರಯತ್ನ ನಡೆಸಲಾಗುವುದು. ಎಂದು ಭರವಸೆ ನೀಡಿದರು.
ಬೀಡಿ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಸೈಯ್ಯದ್ ಮುಜೀಬ್ ತುಮಕೂರು, ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಸಿಐಟಿಯು ಮುಖಂಡ ಬಿ.ಎಂ ಭಟ್ ಅವರು ಅನಿರ್ಧಿಷ್ಟ ಮುಷ್ಕರದ ನೇತೃತ್ವ ವಹಿಸಿದ್ದು
ಬೀಡಿ ಗುತ್ತಿಗೆದಾರರ ಸಂಘಟನೆಗಳ ಮುಖಂಡರುಗಳು ಹಾಗೂ ಬೀಡಿ ಕಾರ್ಮಿಕ ದಂಘಟನೆಯ ಮುಖಂಡರುಗಳು ಧರಣಿಯಲ್ಲಿ ಬಾಗಿಗಳಾಗುತ್ತಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಗುತ್ತಿಗೆ ದಾರರ ಸಂಘದ ಮುಖಂಡರುಗಳಾದ ಸಿ ಮಹಮ್ಮದ್ ಕಕ್ಕಿಂಜೆ, ಶಿವಾನಂದರಾವ್, ಮಾತನಾಡಿದರು. ಹೋರಾಟದ ನೇತೃತ್ವವನ್ನುಕಾರ್ಮಿಕ ಮುಖಂಡರುಗಳಾದ ಈಶ್ವರಿ ಪದ್ಮುಂಜ, ನೆಬಿಸಾ, ಜಯರಾಮ ಮಯ್ಯ, ಕಿರಣಪ್ರಭಾ, ಕುಮಾರಿ, ರಾಮಚಂದ್ರ, ಅಭಿಷೇಕ್ ಹಾಗೂ ಇತರರು ವಹಿಸಿದ್ದರು.

ಬೇಡಿಕೆ ಈಡೇರಿಸದಿದ್ದರೆ ಅಮರಣಾಂತ ಉಪವಾಸ; ಬಿ.ಎಂ ಭಟ್ .


ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಬಿ.ಎಂ ಭಟ್ ಯಾವುದೆ ಕಾರಣಕ್ಕೂ ಕಂಪೆನಿ ಮುಚ್ಚಲು ಅವಕಾಶ ನೀಡುವುದಿಲ್ಲ. ಕಂಪೆನಿಯನ್ನು ಸ್ಥಳಾಂತರಿಸುವ ನೋಟೀಸ್ ಹಾಕಿದಾಗಲೇ ಇದರಿಂದಾಗುವ ಸಮಸ್ಯೆ ಬಗ್ಗೆ ಕಂಪೆನಿಯವರ ಗಮನ ಸೆಳೆದಿದ್ದೇವೆ ಸರಕಾರದ ಕಾನೂನುಗಳನ್ನು ಗಾಳಿಗೆ ತೂರಿ ಕಂಪೆನಿಯನ್ನು ಮುಚ್ಚಲು ಮುಂದಾದರೆ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕಂಪೆನಿಯ ಎದುರು ಆರಂಭಿಸಲಾಗುವುದು ಎಂದರು.

ರಾತ್ರಿಯು ಮುಂದುವರಿದ ಧರಣಿ;


ಕಂಪೆನಿ ಮುಚ್ಚುವುದಿಲ್ಲ ಎಂಬ ಬಗ್ಗೆ ಸ್ಪಷ್ಟ ನೆ ಸಿಗುವ ವರೆಗೆ ಅನಿರ್ಧಿಷ್ಟ ಧರಣಿಯನ್ನು ಮುಂದುವರಿಸುವುದಾಗಿ ಪ್ರಕಟಿಸಿರುವ ಹೋರಾಟಗಾರರು ಬೀಡಿ ಕಂಪೆನಿಯ ಎದುರು ರಾತ್ರಿಯೂ ತಮ್ಮ ಧರಣಿಯನ್ನು ಮುಂದುವರಿಸಿದ್ದಾರೆ.
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬೀಡಿ ಕಂಪೆನಿಯವರೊಂದಿಗೆ ಹಾಗೂ ಹೋರಾಟ ಗಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಕಂಪೆನಿಯವರು ಸ್ಪಷ್ಟವಾದ ಭರವಸೆ ನೀಡದ ಹೊರತು ಹೋರಾಟ ಹಿಂಪಡೆಯುವುದಿಲ್ಲ ಎಂಬುದು ಹೋರಾಟಗಾರರ ನಿರ್ಧಾರವಾಗಿದೆ

LEAVE A REPLY

Please enter your comment!
Please enter your name here