ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಪಶು ವೈದ್ಯರೋರ್ವರ ಹಲ್ಲೆಯಿಂದ ಸ್ಥಳೀಯ ನಿವಾಸಿ ಸಾವನ್ನಪ್ಪಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪಟ್ರಮೆ ಗ್ರಾಮದ ಮೈಕೆ ನಿವಾಸಿ ಕೃಷ್ಣ ಯಾನೆ ಕಿಟ್ಟ(55ವ.)ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅನಾರೋಗ್ಯದಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮೇ 13ರಂದು ಕೊಕ್ಕಡಕ್ಕೆ ಬಂದ ಕೃಷ್ಣ ಅವರಿಗೆ ಅಲ್ಲೇ ಕುಡಿದ ಮತ್ತಿನಲ್ಲಿದ್ದ ಕೊಕ್ಕಡದ ಪಶುವೈದ್ಯ ಕುಮಾರ್ ಎಂಬವರು ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಅವರು ಅಸ್ವಸ್ಥಗೊಂಡು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ದೆಂದು ವರದಿಯಾಗಿದೆ.
ಧರ್ಮಸ್ಥಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.ಮೃತರಿಗೆ ಪತ್ನಿ, ಓರ್ವ ಪುತ್ರಿ ಹಾಗೂ ಸಹೋದರ ಇದ್ದಾರೆ.