ಚಂಡೀಗಢ; ಹರಿಯಾಣದಲ್ಲಿ ಮೂವರು ಪಕ್ಷೇತರ ಶಾಸಕರು ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದು ಹರಿಯಾಣದ ಬಿಜೆಪಿ ಸರಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿದೆ.
ಶಾಸಕರಾದ ಸೋಮ್‌ಬೀರ್ ಸಂಗವಾನ್, ರಣಧೀರ್ ಗೋಲೆನ್ ಮತ್ತು ಧರ್ಮಪಾಲ್ ಗೋಂದರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ರೋಹಕ್‌ನಲ್ಲಿ ಸುದ್ದಿಗೋಷ್ಠಿ ಕರೆದು ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಉಪಸ್ಥಿತರಿದ್ದರು.
ರೈತರಿಗೆ ಸಂಬಂಧಿಸಿದ ವಿಷಯ ಸೇರಿದಂತೆ ಹಲವು ವಿಷಯಗಳಿಂದ ಪ್ರಭಾವಿತರಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಗೋಂದರ್ ತಿಳಿಸಿದರು.
ರೈತರಿಗೆ ಸಂಬಂಧಿಸಿದ ವಿಷಯ ಸೇರಿದಂತೆ ಹಲವು ವಿಷಯಗಳಿಂದ ಪ್ರಭಾವಿತರಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಗೋಂದರ್ ತಿಳಿಸಿದರು.
‘ಪ್ರಸ್ತುತ ಹರಿಯಾಣ ವಿಧಾಸಭೆಯ ಒಟ್ಟು ಸದಸ್ಯರ ಸಂಖ್ಯೆ 88. ಈ ಪೈಕಿ ಬಿಜೆಪಿ 40 ಸದಸ್ಯರನ್ನು ಹೊಂದಿದೆ. ಈ ಮೂಲಕ ಸೈನಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ಈ ಕೂಡಲೇ ಅವರು ರಾಜೀನಾಮೆ ಸಲ್ಲಿಸಬೇಕು. ಶೀಘ್ರವೇ ವಿಧಾನಸಭೆ ಚುನಾವಣೆ ನಡೆಸಬೇಕು’ ಎಂದು ಉದಯ್ ಭಾನ್ ಆಗ್ರಹಿಸಿದರು.