Home ರಾಜಕೀಯ ಸಮಾಚಾರ ಜೆಡಿಎಸ್ ನಿಂದ ಪ್ರಜ್ವಲ್ ಉಚ್ಚಾಟನೆ. ಪೆನ್ ಡ್ರೈವ್ ಹಂಚಿಕೆ ಬಗ್ಗೆಯೂ ತನಿಖೆಯಾಗಲಿ; ಕುಮಾರಸ್ವಾಮಿ

ಜೆಡಿಎಸ್ ನಿಂದ ಪ್ರಜ್ವಲ್ ಉಚ್ಚಾಟನೆ. ಪೆನ್ ಡ್ರೈವ್ ಹಂಚಿಕೆ ಬಗ್ಗೆಯೂ ತನಿಖೆಯಾಗಲಿ; ಕುಮಾರಸ್ವಾಮಿ

113
0

ಹಾಸನ; ಹಾಸನ ಪೆನ್ ಡ್ರೈವ್ ಪ್ರಕರಣದ‌ ಹಿನ್ನಲೆಯಲ್ಲಿ ಜೆಡಿಎಸ್ ನಿಂದ ಸಂಸದ ಪ್ರಜ್ವಲ್ ರೇವಣ್ಣ ಉಚ್ಚಾಟನೆ ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಅವರು ಈ ಬಗ್ಗೆ ರಾತ್ರಿಯೇ ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ. ನಿನ್ನೆಯೇ ಈ ಬಗ್ಗೆ ತೀರ್ಮಾನ ಆಗಿತ್ತು. ನಾಳೆ ಕೋರ್ ಕಮಿಟಿ ಸಭೆಯಲ್ಲಿ ಉಚ್ಚಾಟನೆ ಬಗ್ಗೆ ತೀರ್ಮಾನ ಆಗಬೇಕಿತ್ತು. ಆದರೆ ಅದಕ್ಕೂ ಮೊದಲೇ ದೇವೇಗೌಡರು ಉಚ್ಚಾಟನೆ ಮಾಡಿದ್ದಾರೆ ಎಂದಿದ್ದಾರೆ.ಈ ನೆಲದ ಕಾನೂನಿನಲ್ಲಿ ತಪ್ಪು ಆಗಿದ್ರೆ ಶಿಕ್ಷೆ ಆಗಬೇಕು.ಈ ಪ್ರಕರಣದಲ್ಲಿ ದೇವೇಗೌಡರನ್ನ, ನನ್ನನ್ನ ಯಾಕೆ ತರ್ತೀರಾ ಬಿಜೆಪಿ ಗೂ ಈ ಪ್ರಕರಣ ಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.ಈಗಾಗಲೇ ನಾವು ಬೇರೆ ಆಗಿದ್ದೇವೆ. ನಮ್ಮ ವ್ಯವಹಾರ ಅವರ ವ್ಯವಹಾರ ಬೇರೆ ಬೇರೆ ನಡೆಯುತ್ತೆ. ರಾಜ್ಯದ ಹೆಣ್ಣು ಮಕ್ಕಳ ಧ್ವನಿಯಾಗಿ ನಾನು ಧ್ವನಿ ಎತ್ತುತ್ತೇನೆ.ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.ತಪ್ಪು ಆಗಿದ್ರೆ ಈ ನೆಲ್ಲದಲ್ಲಿ ಶಿಕ್ಷೆ ಆಗಬೇಕು ಎಂದಿದ್ದಾರೆ.

ಕಾನೂನು ಉಲ್ಲಂಘನೆ ಆಗಿದ್ರೆ, ಬಲವಂತ ಆಗಿದ್ರೆ ಕಾನೂನು ರೀತಿಯ ಕ್ರಮ ಆಗಲಿ.ಚುನಾವಣೆ ಸಮಯದಲ್ಲಿ ಪೆನ್ ಡ್ರೈವ್ ಹಂಚಿರುವುದು ತನಿಖೆಯಾಗಬೇಕು.ಯಾರಿಂದ ಹೊರಬಂದಿದೆ, ಯಾರು ಲಕ್ಷಾಂತರ ಪೆನ್ ಹಂಚಿದವರು ಯಾರು ಅಂತ ತಿಳಿಯಬೇಕು. ಪೆನ್ ಡ್ರೈವ್ ಹಂಚಿದ್ದು ದೊಡ್ಡ ಅಪರಾಧ.ಈ ಬಗ್ಗೆಯೂ ತನಿಖೆಯಾಗಬೇಕು ಎಂದರು.

LEAVE A REPLY

Please enter your comment!
Please enter your name here