ಬೆಳ್ತಂಗಡಿ; ವೇಣೂರು ಗ್ರಾಮದ ಹಂದೇವ್ ನಲ್ಲಿ ಸಂಜೀವ ದೇವಾಡಿಗ ರವರಿಗೆ ನಿರ್ಮಿಸಿ ಕೊಡಲಾದ ವಾತ್ಸಲ್ಯ ಮನೆಯನ್ನು ಎಸ್ ಡಿ ಎಮ್ ಕ್ಷೇಮವನ ಬೆಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರದ್ಧಾ ಅಮಿತ್ ರವರು ಗುರುವಾರ ಹಸ್ತಾಂತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಸಮಾಜದ ಕಟ್ಟಕಡೆಯ ನಿರ್ಗತಿಕ ಅಸಹಾಯಕ ಕುಟುಂಬಗಳಿಗೆ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು ವಾತ್ಸಲ್ಯ ಮನೆ ನಿರ್ಮಾಣ ಮಾಡುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ.
ನೂತನ ಮನೆಯ ಹಸ್ತಾಂತರ ನೆರವೇರಿಸಿ ಮಾತನಾಡಿದ ಶ್ರದ್ದಾ ಅಮಿತ್ ಅವರುಮನುಷ್ಯ ಬದುಕಿನ ಉದ್ದಕ್ಕೂ ನೆಮ್ಮದಿಯಾಗಿ ಬದುಕಬೇಕು ಎಂದು ದುಡಿಮೆಯನ್ನು ಮಾಡುತ್ತಾನೆ. ವಾಸಕ್ಕೆ ಮನೆಯನ್ನು ನಿರ್ಮಿಸಬೇಕು ಎಂಬುದು ಎಲ್ಲರ ಆಶಯವಾಗಿರುತ್ತದೆ. ಆದರೆ ಕೆಲವೊಂದು ಕುಟುಂಬಗಳಿಗೆ ನಾನಾ ಕಾರಣಗಳಿಂದಾಗಿ ತನ್ನ ಆಶಯದ ಗುರಿಗಳನ್ನು ಸಾಧಿಸಲು ಅಸಹಾಯಕರಾಗಿ ತಮ್ಮ ಬದುಕು ಶೋಷನಿಯ ಸ್ಥಿತಿಯಲ್ಲಿರುತ್ತದೆ. ಅಂತವರನ್ನು ಗುರುತಿಸಿ ತನ್ನ ಜೀವನದ ಕೊನೆಯ ಗಟ್ಟದಲ್ಲಿರುವ ಕುಟುಂಬಗಳಿಗೆ ತೀರಾ ಅವಶ್ಯಕತೆಯುಳ್ಳ ಮೂಲಭೂತ ವ್ಯವಸ್ಥೆಗಳನ್ನು ಯೋಜನೆಯ ವತಿಯಿಂದ ನೀಡಲಾಗುತ್ತಿದೆ.
ಯೋಜನೆಯ ವತಿಯಿಂದ 17873 ಕುಟುಂಬಗಳಿಗೆ ಮನೆ ನೀರು ಬೆಳಕು ಔಷಧಿ ಆಹಾರ ಶೌಚಾಲಯ ಗಳನ್ನು ನಿರ್ಮಿಸಿಕೊಡುವುದರೊಂದಿಗೆ ಷೋಷಕರನ್ನು ನಿಯೋಜನೆ ಮಾಡಿ ವ್ಯವಸ್ಥೆ ಕಲ್ಪಿಸಿರುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಪ್ರಶಂಸಿದರು. ಅದರಲ್ಲಿ ಒಂದಾದ ಈ ಮನೆಯನ್ನು ಅತ್ಯುತ್ತಮ ವಾಗಿ ನಿರ್ಮಾಣ ಮಾಡಿ ನೀಡಿರುವ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್. , ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ತಾಲೂಕು ಜನ ಜಾಗೃತಿ ವೇದಿಕೆಯ ಕೋಶಾಧಿಕಾರಿ ಗಿರೀಶ್ ಮಹಿಳಾ ಜ್ಞಾನ ವಿಕಾಸದ ನಿರ್ದೇಶಕರಾದ ವಿಠಲ ಪೂಜಾರಿ, ಯೋಜನಾಧಿಕಾರಿಗಳಾದ ಸಂಗೀತ ಅಮೃತಾ, ತಾಲೂಕಿನ ಜನ ಜಾಗೃತಿ ವೇದಿಕೆಯ ಕೋಶಾಧಿಕಾರಿಗಳಾದ ಗಿರೀಶ್ , ಸಮನ್ವಯಾಧಿಕಾರಿ ಹರಿಣಿ, ವಲಯ ಮೇಲ್ವಿಚಾರಕರಾದ ಶಾಲಿನಿ, ಸೇವಾ ಪ್ರತಿನಿಧಿ ಜಯಂತಿ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿಗಳಾದ ದಯಾನಂದರವರು ಸ್ವಾಗತಿಸಿ ವಂದಿಸಿದರು.