ಬೆಳ್ತಂಗಡಿ; ಕರಾಯದಲ್ಲಿ ಸ್ಕೂಟರ್ ಸ್ಕಿಡ್ ಆಗಿ ಮಗುಚಿಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ಕರಾಯ ಗ್ರಾಮದ ನಿವಾಸಿ ನಾರಾಯಣ ನಾಯ್ಕ (79) ಎಂಬವರಾಗಿದ್ದಾರೆ.
ಇವರು ಫೆ 25ರಂದು ತನ್ನ ಮಗ ಉದಯ ನಾಯ್ಕ ಎಂಬರ ಸ್ಕೂಟರ್ ನಲ್ಲಿ ರಾತ್ರಿಯ ವೇಳೆ ಪ್ರಯಾಣಿಸುತ್ತಿದ್ದಾಗ ಕರಾಯ ಗ್ರಾಮದ ಮರಿಪಾದೆ ಬಳಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಸವಾರ ಉದಯ ನಾಯ್ಕ ಹಾಗೂ ಅವರ ತಂದೆ ನಾರಾಯಣ ನಾಯ್ಕ ರಸ್ತೆಗೆ ಬಿದ್ದು ಗಂಭೀರ ಗಾಯಗಳಾಗಿದೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ನಾರಾಯಣ ನಾಯ್ಕ ಅವರು ಫೆ.26ರಂದು ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ