Home ಸ್ಥಳೀಯ ಸಮಾಚಾರ ರುಡ್‌ಸೆಟ್‌ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಸಮಾರೋಪ

ರುಡ್‌ಸೆಟ್‌ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಸಮಾರೋಪ

97
0

ಬೆಳ್ತಂಗಡಿ: ಕಠಿಣ ಪರಿಶ್ರಮವೇ ಯಶಸ್ಸಿನ ಗುಟ್ಟು, ಯಶಸ್ಸು ಎಂಬುದು ಸುಲಭವಾಗಿ ದಕ್ಕುವಂತದ್ದಲ್ಲ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕು, ಇಚ್ಛಾಶಕ್ತಿ ಬೇಕು, ಜೊತೆಗೆ ಕೆಲಸವನ್ನು ಕಷ್ಟವೆನ್ನದೆ ಇಷ್ಟಪಟ್ಟು ಮಾಡಿ ಎಂದರು. ಅನೇಕ ಯುವಕ/ಯುವತಿಯರು ರುಡ್‌ಸೆಟ್‌ ಸಂಸ್ಥೆಯಲ್ಲಿ ಕಲಿತು ಸಾದನೆ ಮಾಡಿದವರ ಸಾಲಿಗೆ ನೀವು ಬರಬೇಕು, ನಿಮ್ಮ ಬದುಕಿನ ಕಥೆಗಳೇ ನಾಳೆ ಸಾಧನೆಯ ಕಥೆಗಳಾಗಿ ಬದಲಾಗಬೇಕು ಎಂದು ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್‌ ಜನಾರ್ಧನ್‌ ರವರು ಅಭಿಪ್ರಾಯ ಪಟ್ಟರು.

ಅವರು ರುಡ್‌ಸೆಟ್‌ ಸಂಸ್ಥೆಯಲ್ಲಿ ನಡೆದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್‌ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್‌ ಕಲ್ಲಾಪುರರವರು ಆದ್ಯಕ್ಷತೆ ವಹಿಸಿದ್ದರು, ಸಂಸ್ಥೆಯ ನಿರ್ದೇಶಕರಾದ ಎಮ್.‌ ಸುರೇಶ್‌ರವರು ಉಪಸ್ಥಿತರಿದ್ದರು, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಕರಾದ ಅನಸೂಯ ವಂದಿಸಿದರು. 13 ದಿನಗಳ ಈ ಕಾರ್ಯಕ್ರಮದಲ್ಲಿ 31 ಅಭ್ಯರ್ಥಿಗಳು ಭಾಗವಹಿಸುವುದರ ಜೊತೆಗೆ ವಿವಿಧ ಉದ್ಯಮಗಳನ್ನು ಪ್ರಾರಂಭಿಸುವ ಬಗ್ಗೆ ರೂಪು ರೇಷೆಗಳನ್ನು ತಯಾರಿಸಿದರು. ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here