Home ರಾಷ್ಟ್ರ/ರಾಜ್ಯ ಜಿಲ್ಲೆಯಲ್ಲಿ ಮತೀಯ ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ ದಿನೇಶ್ ಗುಂಡುರಾವ್

ಜಿಲ್ಲೆಯಲ್ಲಿ ಮತೀಯ ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ ದಿನೇಶ್ ಗುಂಡುರಾವ್

62
0

ದಿನೇಶ್ ಗುಂಡೂರಾವ್, ಬೆಳ್ತಂಗಡಿ ಸಮಾಚಾರ

ಮಂಗಳೂರು; ದಕ. ಜಿಲ್ಲೆಯಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳಿಗೆ ಅವಕಾಶ ಕೊಡಬಾರದು. ಇದು ಜಿಲ್ಲೆಗೆ ಕಳಂಕವಾಗಿದ್ದು, ಹೊರಗಿ ನವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಜಿಲ್ಲೆಯಲ್ಲಿ ಎಲ್ಲರೂ ಒಂದಾಗಿ ಬೆರೆತು, ಸುರಕ್ಷತೆಯ ವಾತಾವರಣ ಸೃಷ್ಟಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್, ಬಜರಂಗದಳದಂತಹ ಸಂಘಟನೆಗಳ ಪ್ರಚೋದನೆಯಿಂದ ಮತೀಯ ಗೂಂಡಾಗಿರಿ ಪ್ರಕರಣಗಳು ನಡೆಯುತ್ತಿವೆ. ಬಿಜೆಪಿಯ ಕೆಲ ನಾಯಕರಿಗೆ ಇದೇ ಬಂಡವಾಳವಾಗಿದೆ ಎಂದು ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಿರುವ ಆ್ಯಂಟಿ ಕಮ್ಯುನಲ್ ವಿಂಗ್ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು, ಈಚೆಗಷ್ಟೇ ಮತೀಯ ಗೂಂಡಾಗಿರಿ ನಡೆಸಿದ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ. ಉಡುಪಿಯಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದ.ಕ.ದಲ್ಲೂ ನಿಗಾವಹಿಸಲಾಗಿದೆ ಪೊಲೀಸ್ ಇಲಾಖೆಗೆ ಇದನ್ನು ನಿಯಂತ್ರಿಸುವ ಶಕ್ತಿ ಇದೆ ಎಂದರು.

ದ.ಕ. ಜಿಲ್ಲೆಯಲ್ಲಿ ಕೋಳಿ ಅಂಕಕ್ಕೆ ಸಂಬಂಧಿಸಿ ನನಗೆ ಯಾವುದೇ ದೂರು ಬಂದಿಲ್ಲ. ಆಟ ಮತ್ತು ಜೂಜು ಹೀಗೆ ಎರಡು ಕಾರಣಕ್ಕೆ ಕೋಳಿ ಅಂಕಗಳು ನಡೆಯುತ್ತವೆ. ಆಟವನ್ನು ನಮ್ಮ ಕಲೆ, ಸಂಪ್ರದಾಯ ವೆಂದು ಒಪ್ಪಿಕೊಳ್ಳಬಹುದು. ಕಂಬಳ, ಜಲ್ಲಿಕಟ್ಟು ಇಂತಹ ಕ್ರೀಡೆಗಳು ನಡೆಯುತ್ತವೆ. ಆದರೆ, ಜೂಜು ನಡೆಸಿದಾಗ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರಕಾರಕ್ಕೆ ಕೇಂದ್ರಕ್ಕೆ ನೀಡುವ ತೆರಿಗೆ ಮತ್ತಿತರ ಮೊತ್ತಗಳು ಹೆಚ್ಚಾಗಿದ್ದರೂ, ಕೇಂದ್ರ ಸರಕಾರ ರಾಜ್ಯಕ್ಕೆ ನೀಡುವ ಅನುದಾನ 10 ವರ್ಷಗಳಿಂದ ಅಷ್ಟೇ ಇದೆ. ಬಿಜೆಪಿ ಸಂಸದರು ಕೂಡ ಈ ಬಗ್ಗೆ ಮಾತನಾಡದಿರುವುದು ದುರ್ದೈವದ ಸಂಗತಿ ಎಂದರು.

ಬಿಜೆಪಿಯವರು ವಿರೋಧ ಪಕ್ಷ ರಹಿತ ದೇಶ ಮಾಡಲು ಹೊರಟಿದ್ದಾರೆ. ಭಯಭೀತಿಯ ವಾತಾವರಣ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಹಿತವಾದ ಬೆಳವಣಿಗೆ ಅಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಧರ್ಮದ ಮಾತಿನ ಅಡಿಯಲ್ಲಿ ಬಿದ್ದಿವೆ ಪ್ರಧಾನಿ ನರೇಂದ್ರ ಮೋದಿ ಕೂಡ ಕಾಂಗ್ರೆಸ್, ನೆಹರೂ ಬೈದಿದ್ದು ಬಿಟ್ಟರೆ ಬೇರೇನಾದರೂ ಮಾತನಾಡುತ್ತಾರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರದ ವಿರುದ್ದ ಶೇ.40ರಷ್ಟು ಕಮಿಷನ್ ಆರೋಪ ಮಾಡಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ವಿಷಯ ನಿಜವೇ ಆಗಿದ್ದರೆ, ನೇರವಾಗಿ ಬಂದು ಮುಖ್ಯಮಂತ್ರಿಗೆ ಹೇಳಬಹುದು. ನಮ್ಮ ಸರಕಾರ ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿದ್ದರೆ, ನಾನು ತನಿಖೆ ಮಾಡಿಸುತ್ತೇನೆ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದ್ದರೂ ದಾಖಲೆ ನೀಡಲಿ. ಹಿಂದಿನ ಬಿಜೆಪಿ ಸರಕಾರದ ಇದ್ದಾಗ ಅವರು ಭ್ರಷ್ಟಾಚಾರದ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾವ ಮಾಡಿದ್ದರು. ಈ ಆರೋಪದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳಲಾಗದು ಎಂದರು.

LEAVE A REPLY

Please enter your comment!
Please enter your name here