Home ಸ್ಥಳೀಯ ಸಮಾಚಾರ ಫೆ 11 ಬೆಳ್ತಂಗಡಿ ಧರ್ಮಪ್ರಾಂತ್ಯ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ...

ಫೆ 11 ಬೆಳ್ತಂಗಡಿ ಧರ್ಮಪ್ರಾಂತ್ಯ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿ:

63
0

ಫೆ 11 ಬೆಳ್ತಂಗಡಿ ಧರ್ಮಪ್ರಾಂತ್ಯ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮ:
ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿ:

ಬೆಳ್ತಂಗಡಿ:”ಕರ್ನಾಟಕ ಪ್ರಥಮ ಸೀರೋ ಮಲಬಾರ್ ಧರ್ಮಪ್ರಾಂತ್ಯವಾದ ಬೆಳ್ತಂಗಡಿ ಧರ್ಮಪ್ರಾಂತ್ಯದ ಸ್ಥಾಪನೆಯ ಮತ್ತು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷ ದೀಕ್ಷೆಯ ರಜತ ಮಹೋತ್ಸವವನ್ನು ಬೆಳ್ತಂಗಡಿಯಲ್ಲಿ ಫೆ.11ರಂದು ಹಮ್ಮಿಕೊಳ್ಳಲಾಗಿದೆ” ಎಂದು ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ಫಾ.ಜೋಸ್ ವಲಿಯ ಪರಂಬಿಲ್ ಹೇಳಿದರು.
ಅವರು ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಂದು ಬೆಳಿಗ್ಗೆ 8.45 ಗಂಟೆಗೆ ‘ವಂದನೆಗಳೊಂದಿಗೆ ಒಮ್ಮನದಿಂ’ ಕೃತಜ್ಞತಾ ಅ.ವಂ ಮೇಜರ್ ಆರ್ಚ್ ಬಿಷಪ್ ರಾಫೇಲ್ ತಟ್ಟಿಲ್, ಅವರು ಬಲಿಪೂಜಾರ್ಪಣೆ ನೆರವೇರಿಸಲಿದ್ದಾರೆ.‌
ಕರ್ನಾಟಕ ಹಾಗೂ ಕೇರಳದಿಂದ ಶ್ರೇಷ್ಠ ಮಹಾಧರ್ಮಾಧ್ಯಕ್ಷರುಗಳು, ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು , ಧರ್ಮಭಗಿನಿಯರು ಹಾಗೂ ಜನರು ದಿವ್ಯ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪೂರ್ವಾಹ್ನ 11 ಗಂಟೆಗೆ ರಜತ ಸಮಾರೋಪ ಸಮಾರಂಭ ನಡೆಯಲಿದೆ.ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಭಾಪತಿ ಯು.ಟಿ. ಖಾದರ್, ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯ ಸಭಾ ಸದಸ್ಯ ಡಾ.ಡಿ ವೀರೇಂದ್ರ ಹೆಗ್ಗಡೆ, ಇಂಧನ ಸಚಿವ ಟಿ.ಜೆ. ಜಾರ್ಜ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳು, ಜನಪ್ರತಿನಿಧಿಗಳು, ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಧರ್ಮಪ್ರಾಂತ್ಯದ ಪಿ ಆರ್ ಒ ಫಾ.ಟೋಮಿ ಕ್ಯಾಲಿಕಟ್ ಮಾತನಾಡಿ
“25 ವರ್ಷಗಳ ಹಿಂದೆ ಆರಂಭವಾದ ಈ ಧರ್ಮಪ್ರಾಂತ್ಯ ಸುಮಾರು 30 ಸಾವಿರ ಸದಸ್ಯರನ್ನು ಒಳಗೊಂಡಿದೆ. ಇಲ್ಲಿನ ಧರ್ಮಪ್ರಾಂತ್ಯಕ್ಕಾಗಿ ಧರ್ಮದೀಕ್ಷೆ ಸ್ವೀಕರಿಸಿದ 57 ಧರ್ಮಗುರುಗಳು, ಧರ್ಮದೀಕ್ಷೆಗಾಗಿ 26 ಮಂದಿ ತರಬೇತಿ ಪಡೆಯುತ್ತಿರುವರು. ಇದರೊಂದಿಗೆ 27 ಸನ್ಯಾಸ-ಧರ್ಮಗುರುಗಳು ಹಾಗೂ 198 ಧರ್ಮಭಗಿನಿಯರು ಸೇವೆ ಸಲ್ಲಿಸುತ್ತಿರುವರು. ಸರಕಾರದ ಕ್ರೈಸ್ತ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಆರ್ಥಿಕ ನೆರವು ಮತ್ತು ದಾನಿಗಳ ನೆರವಿನಿಂದ ಮೂಲಕ 41 ಕಡೆಗಳಲ್ಲಿ ಹೊಸ ಚರ್ಚ್ ಕಟ್ಟಡಗಳು,32 ಕಡೆಗಳಲ್ಲಿ ಧರ್ಮಗುರುಗಳ ನಿವಾಸಗಳು, ಸ್ಮಶಾನಗಳ ಮೂಲಸೌಕರ್ಯ ಅಭಿವೃದ್ಧಿ,ಚರ್ಚ್ ಗಳ ಆವರಣ ಗೋಡೆ ನಿರ್ಮಾಣ, ಇಂಟರ್ಲಾಕ್ ಅಳವಡಿಕೆ ಸಮುದಾಯ ಭವನ ನಿರ್ಮಾಣ ಸಹಿತ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. 16 ಕಡೆಗಳಲ್ಲಿ ಕಾನ್ವೆಂಟ್ ಗಳನ್ನು ಸ್ಥಾಪಿಸಲಾಗಿದೆ ಎಂದರು.
“ಕಳೆದ 24 ವರ್ಷಗಳ ಇತಿಹಾಸದಲ್ಲಿ 2000ದಲ್ಲಿಮಹಾ ಜ್ಯುಬಿಲಿ ಆಚರಣೆ, 2004ರಲ್ಲಿ ಜ್ಞಾನ ನಿಲಯ ಉದ್ಘಾಟನೆ, 2007ರಲ್ಲಿ ಪ್ರಧಾನ ದೇವಾಲಯ ಉದ್ಘಾಟನೆ, 2009ರಲ್ಲಿ ಧರ್ಮಪ್ರಾಂತ್ಯದ ಮಹಾಸಭೆ, 2015ರಲ್ಲಿ ಮೇಜರ್ ಆರ್ಚ್ ಬಿಷಪ್ ಸಂದರ್ಶನ, 2017ರಲ್ಲಿ ಕೆ.ಎಸ್. ಎಂ. ಸಿ.ಎ. ಸಮ್ಮೇಳನ, 2018ರಲ್ಲಿ ಸಿ.ಎಂ.ಎಲ್‌. ಮಕ್ಕಳ ದೇಶಿಯ ಸಮ್ಮೇಳನ, 2020ರಲ್ಲಿ ಪ್ಲಾಟಿನಂ ಜ್ಯುಬಿಲಿ ಆಚರಣೆ, 2002,2012, 2015 ಮತ್ತು 2023ರಲ್ಲಿ ಯುವಜನ ಕನ್ವೆಂಷನ್ ನಡೆಸಲಾಗಿದೆ. ಈ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿ ಅಪಾರಭಕ್ತಿ, ಸಮರ್ಥ ನಾಯಕತ್ವ ,ಸಂಘಟನಾ ಚಾತುರ್ಯ, ದೂರದೃಷ್ಟಿ ಧರ್ಮ ಪ್ರಾಂತ್ಯದ ಎಲ್ಲಾ ಪ್ರಗತಿ ಹೆಜ್ಜೆಗಳಿಗೆ ಕಾರಣವಾಗಿದೆ” ಎಂದರು.
ಮಾಧ್ಯಮ ಪ್ರತಿನಿಧಿ ಫಾ.ಸುನಿಲ್ ಐಸಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here