ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿಗೆ ಸರಕಾರ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿದೆ.
ಶಿರ್ಲಾಲು ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನ ನೆಲ್ಲಿಗುಡ್ಡೆ ಶಿರ್ಲಾಲು ಇದರ ಆಡಳಿತ ಸಮಿತಿಯ ಅಧ್ಯಕ್ಷರು,ಜನ ಶಿಕ್ಷಣ ನಿಲಯದ ಮಾಜಿ ಜಿಲ್ಲಾ ಅಧ್ಯಕ್ಷರು ಸಾಮಾಜಿಕ ಕಾರ್ಯಕರ್ತರಾದ ಬಾಬು ಎ ಎರ್ಮೆತ್ತೋಡಿ, ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ,ಪುದುವೆಟ್ಟು ಮಿಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಬೊಮ್ಮಣ್ಣ ಗೌಡ, ಮಾಜಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರು ,ತೊಟತ್ತಾಡಿ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ಕೆ.ಸಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಉಪಾಧ್ಯಕ್ಷರು , ಸಾಮಾಜಿಕ ಜಾಲಾತಾಣದ ಸಂಚಾಲಕರಾಗಿ ,ಕಾಂಗ್ರೆಸ್ ಪಧವೀಧರ ಘಟಕದ ಅಧ್ಯಕ್ಷರಾಗಿರುವ, ಇಸ್ಮಾಯಿಲ್ ಕೆ ಪೆರಿಂಜೆ ಇವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿದೆ.